ಕದನ ವಿರಾಮ ಉಲ್ಲಂಘಿಸಿದ ಪಾಕ್‌‌ ➤ ಓರ್ವ ಭಾರತೀಯ ಯೋಧ ಹುತಾತ್ಮ

(ನ್ಯೂಸ್ ಕಡಬ) newskadaba.com ಶ್ರೀನಗರ,ಜೂ 05: ಪಾಕಿಸ್ತಾನ ತನ್ನ ನೀಚ ಬುದ್ದಿಯನ್ನ ಪ್ರತಿ ಬಾರಿಯು ಪ್ರದರ್ಶಿಸುತ್ತಲೆ ಬಂದಿದೆ. ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿ ಪರಿಣಾಮ ಭಾರತೀಯ ಯೋಧನೊಬ್ಬ ಹುತಾತ್ಮನಾದ ಘಟನೆ ರಾಜೌರಿ ಜಿಲ್ಲೆಯ ಸುಂದರ್ ಬಾನಿ ನಡೆದಿದೆ.

 

 

ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಯೋಧನೊಬ್ಬ ಹುತಾತ್ಮನಾದ ಘಟನೆ ರಾಜೌರಿ ಜಿಲ್ಲೆಯ ಸುಂದರ್ ಬಾನಿ ನಡೆದಿದೆ.ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನೆಯ ಅಧಿಕಾರಿಗಳ ಪ್ರಕಾರ, ಸುಂದರ್‌ ಬಾನಿ ಸೆಕ್ಟರ್‌ನ ಪ್ರದೇಶಗಳನ್ನು ಪಾಕಿಸ್ತಾನ ಸೇನೆಯು ಗುರಿಯಾಗಿಸಿತ್ತು. ಪಾಕಿಸ್ತಾನ ಪೂಂಚ್‌‌ ಜಿಲ್ಲೆಯಲ್ಲೂ ಕೂಢಾ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಓರ್ವ ಉಗ್ರನನ್ನ ರಾಜೌರಿ ಕಾಲಕೋಟೆ ಪ್ರದೇಶದದಲ್ಲಿ ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು 2ರಿಂದ 3 ಉಗ್ರರು ಅಡಗಿರುವ ಸಾಧ್ಯತೆಯಿದ್ದು, ರಜೌರಿ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Also Read  ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ➤ ರಸ್ತೆಯಲ್ಲಿ ಕೆಟ್ಟುನಿಂತ ಆರ್‌ಬಿಐಯ ಟ್ರಕ್.!

 

 

error: Content is protected !!
Scroll to Top