ಮೂಕ ಪ್ರಾಣಿಯ ಹತ್ಯೆ ➤ ದುಷ್ಕರ್ಮಿಗಳಿಗೆ ಕಾದಿದೆ ಕಠಿಣ ಶಿಕ್ಷೆ

(ನ್ಯೂಸ್ ಕಡಬ) newskadaba.com ಕೇರಳ,ಜೂ 04: ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್ ವ್ಯಾಲಿಯಲ್ಲಿ ಕಳೆದ ದಿನ ಹೃದಯ ವಿದ್ರಾವಕ ಘಟನೆಯೊಂದು ನಡೆದಿತ್ತು.ಹೌದು, ಆ ಮೂಕ ಪ್ರಾಣಯೊಂದು ತನ್ನ ಹೊಟ್ಟೆಯಲ್ಲಿ ಕಂದನನ್ನು ಇಟ್ಟು ಕೊಂಡು ಆಹಾರ ಅರಸುತ್ತಾ ಗ್ರಾಮವೊಂದರ ಸಮೀಪಕ್ಕೆ ಬಂದಿತ್ತು. ಆದರೆ ಅಲ್ಲಿ ಅಗಿದ್ದೇ ಬೇರೆ. ಮನುಷ್ಯ ರೂಪದಲ್ಲಿದ್ದ ಕ್ರೂರ ನರ ರಾಕ್ಷಸರು, ಅನನಾಸುವಿನಲ್ಲಿ ಪಟಾಕಿ ಇಟ್ಟು ಆ ಗರ್ಭಿಣಿ ಆನೆಯನ್ನ ಹತ್ಯೆ ಮಾಡಿಯೇ ಬಿಟ್ಟಿದ್ದರು. ಇಲ್ಲಿ ಮನುಷ್ಯನ ಮಾನವೀಯತೆ ಸತ್ತು ಹೋಗಿದೆ.

 

 

 

ಹೌದು, ಮಲಪ್ಪುರಂ ಜಿಲ್ಲೆಯ ಸೈಲೆಂಟ್ ವ್ಯಾಲಿಯಲ್ಲಿ ಆಹಾರ ಹುಡುಕುತ್ತಾ ಗ್ರಾಮವೊಂದರ ಸಮೀಪಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಅನಾನಸು ಹಣ್ಣಿನಲ್ಲಿ ಪಟಾಕಿ ತುಂಬಿ ತಿನ್ನಲು ಕೊಟ್ಟು ಅನೆಯ ಬಾಯಿ ಸಿಡಿಯುವಂತೆ ಮಾಡಿದ್ದರು. ನೋವು ತಾಳಲಾರದ ಆನೆ ಯಾರಿಗೂ ಹಾನಿ ಮಾಡದೆ ಪಕ್ಕದಲ್ಲೇ ಹರಿಯುವ ನದಿ ನೀರಿನಲ್ಲಿ ನಿಂತು ಪ್ರಾಣ ಬಿಟ್ಟಿತ್ತು.
ಈ ಘಟನೆ ಬಗ್ಗೆ ಅರಣ್ಯ ಅಧಿಕಾರಿ ಮೋಹನ್ ಕೃಷ್ಣನ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿ ದೇಶಾದ್ಯಂತ ಗರ್ಭಿಣಿ ಆನೆ ಸಾವಿಗೆ ವ್ಯಾಪಕ ಆಕ್ರೋಶ ಕೇಳಿಬಂದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜನತೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದು, ಈಗಾಗಲೇ ದುಷ್ಟರ ಪತ್ತೆಗೆ ಉನ್ನತ ಮಟ್ಟದ ತಂಡವೊಂದನ್ನು ರಚಿಸಲಾಗಿದೆ ಎಂದಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಚೀಫ್ ವೈಲ್ಡ್ಲೈಫ್ ವಾರ್ಡನ್ ಸುರೇಂದ್ರ ಕುಮಾರ್, ಇದೊಂದು ಉದ್ದೇಶಪೂರ್ವಕ ಕೃತ್ಯ, ಆನೆ ಹತ್ಯೆ ಮಾಡಿದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ದುಷ್ಟರ ಬಂಧನ ಆಗೋವರೆಗೂ ನಮಗೆ ನೆಮ್ಮದಿ ಇಲ್ಲ. ಎಲ್ಲರೂ ಅವರ ಬಂಧನದ ಸುದ್ದಿಯನ್ನು ಶೀಘ್ರದಲ್ಲೇ ಕೇಳುತ್ತೀರಿ ಎಂದು ಆಶ್ವಾಸನೆ ನೀಡಿದ್ದಾರೆ.

Also Read  ಆಧುನಿಕ‌ ಜೀವ ರಕ್ಷಕ ಸವಲತ್ತುಗಳಿರುವ 65 ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದ ಸಿಎಂ

 

error: Content is protected !!
Scroll to Top