ಟ್ರಬಲ್ ಶೂಟರ್ ಪುತ್ರಿ ಕಲ್ಯಾಣ ➤ ಕಾಫಿ ಡೇ ಸಿದ್ಧಾರ್ಥ್ ಪುತ್ರ, ಡಿಕೆಶಿ ಪುತ್ರಿ ಮದುವೆ ಮಾತುಕತೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.04: ಕೆಪಿಸಿಸಿ ಅಧ್ಯಕ್ಷ, ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮರ್ಥ್ಯ ಹೆಗ್ಡೆಗೆ ಮದುವೆ ಮಾಡಲು ಇತ್ತೀಚೆಗೆ ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಎಸ್.ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ (ಸಿದ್ಧಾರ್ಥ ಹೆಗ್ಡೆ) ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು.

 

 

ಇದೀಗ ಅವರ ಹಿರಿಯ ಪುತ್ರ ಅಮರ್ಥ್ಯ ಹೆಗ್ಡೆ ಜೊತೆ ಕಾಂಗ್ರೆಸ್ನ ‘ಟ್ರಬಲ್ಶೂಟರ್’ ಕನಕಪುರ ಬಂಡೆ, ಡಿ.ಕೆ. ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯಾ ಮದುವೆ ನಡೆಸಲು ಮಾತುಕತೆ ನಡೆದಿದೆ. 15 ದಿನಗಳ ಹಿಂದೆ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳ ಹಿರಿಯರು ಮಾತುಕತೆ ನಡೆಸಿದರು. ಈ ವೇಳೆ ಇಬ್ಬರಿಗೂ ಮದುವೆ ಮಾಡುವ. ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ಶಿವಕುಮಾರ್ ಹಾಗೂ ದಿವಂಗತ ಸಿದ್ಧಾರ್ಥ ಆತ್ಮೀಯರಾಗಿದ್ದರು. ಅಲ್ಲದೆ ಉದ್ಯಮದಲ್ಲಿ ಪಾಲುದಾರರೂ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

Also Read  ಒಂದೆಡೆ ಕಿತ್ತು ತಿನ್ನುವ ಬಡತನ, ಇನ್ನೊಂದೆಡೆ ಕೆಲಸ ಸಿಗದ ಆತಂಕ ➤ ಅಣ್ಣ-ತಮ್ಮ ಆತ್ಮಹತ್ಯೆಗೆ ಶರಣು

error: Content is protected !!
Scroll to Top