ಏರಿಕೆಯತ್ತ ಟಿಕ್-ಟಾಕ್ ರೇಟಿಂಗ್ ➤ ಗೂಗಲ್ ಪ್ಲೇಸ್ಟೋರ್ ನಲ್ಲಿ ಒನ್ ಸ್ಟಾರ್

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.29: ಕಳೆದ ಒಂದು ವಾರದಿಂದ ಭಾರೀ ಕುಸಿತ ಕಂಡಿದ್ದ ಟಿಕ್ ಟಾಕ್ ರೇಟಿಂಗ್ ಇದೀಗ ಮತ್ತೆ 1.2 ರಿಂದ 4.4ಕ್ಕೆ ಏರಿಕೆಯಾಗಿದೆ. ಗೂಗಲ್ ಪ್ಲೇ ಸ್ಟೋರ್, ಟಿಕ್ ಟಾಕ್ ರೇಟಿಂಗ್ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಕೆಲವೊಂದು ಮಾರ್ಗಸೂಚಿಗಳ ಹಿನ್ನಲೆಯಲ್ಲಿ ಲಕ್ಷಾಂತರ ಒನ್ ಸ್ಟಾರ್ ರೇಟಿಂಗ್ ಗಳನ್ನು ತೆಗೆದುಹಾಕಿದೆ. ಭಾರತದಲ್ಲಿ ಟಿಕ್ ಟಾಕ್ ಅತ್ಯಂತ ಜನಪ್ರಿಯ ಆಯಪ್ ಆಗಿ ಬದಲಾಗಿತ್ತು. ಆದರೇ ಕಳೆದ ಒಂದು ವಾರದಿಂದ #tiktokexposed #Bantiktokinindia ಮುಂತಾದ ಹ್ಯಾಷ್ ಟ್ಯಾಗ್ ಗಳು ಏಕಾಎಕಿ ಟ್ರೆಂಡ್ ಸೃಷ್ಟಿಸಿದ್ದವು. ಇದಕ್ಕೆ ಕಾರಣ ವ್ಯಕ್ತಿಯೊಬ್ಬರು ಮಾಡಿದ ಪೋಸ್ಟ್.

 

 

 

 

ವಿಡಿಯೋಗಳಿಗೆ ಭಾರೀ ಆಕ್ಷೇಪ ಕೇಳಿಬಂದಿದ್ದು ಮಾತ್ರವಲ್ಲದೆ ಯೂಟ್ಯೂಬ್ ಮತ್ತು ಟಿಕ್ ಟಾಕ್ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಪರಿಣಾಮವೆಂಬಂತೆ ಪ್ಲೇಸ್ಟೋರ್ ನಲ್ಲಿ ಟಿಕ್ ಟಾಕ್ ರೇಟಿಂಗ್ ಭಾರೀ ಕುಸಿತ ಕಂಡಿದ್ದು. ಮೊದಲು 4.6 ರಷ್ಟಿದ್ದ ರೇಟಿಂಗ್ 1.2ಕ್ಕೆ ಇಳಿದಿತ್ತು. ಇದೀಗ ಗೂಗಲ್ ಕೆಲವೊಂದು ಮಾರ್ಗಸೂಚಿಗಳ ಹಿನ್ನಲೆಯಲ್ಲಿ ಒನ್ ಸ್ಟಾರ್ ರೇಟಿಂಗ್ ಗಳನ್ನು ತೆಗೆದುಹಾಕಿದೆ. ಆದ್ದರಿಂದ ಮತ್ತೆ ಟಿಕ್ ಟಾಕ್ ರೇಟಿಂಗ್ 4.4ಕ್ಕೆ ಏರಿಕೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ ಅಂಕಿ ಅಂಶಗಳ ಪ್ರಕಾರ ಸುಮಾರು 24 ಮಿಲಿಯನ್ ಬಳಕೆದಾರರು ಟಿಕ್ ಟಾಕ್ ಗೆ ರೇಟಿಂಗ್ ನೀಡಿದ್ದಾರೆ.

 

 

 

 

error: Content is protected !!

Join the Group

Join WhatsApp Group