(ನ್ಯೂಸ್ ಕಡಬ) newskadaba.com ನವದೆಹಲಿ,ಮೇ.27., ದೇಶದ ಎರಡನೇ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಭಾರತ್ ಪೆಟ್ರೋಲಿಯಂ (BPCL) ಅನಿಲ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಪ್ರಾರಂಭಿಸಿದ್ದು, ದೇಶಾದ್ಯಂತ ಇನ್ನು ಮುಂದೆ ವಾಟ್ಸಾಪ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.
ಭಾರತ್ ಪೆಟ್ರೋಲಿಯಂ ದೇಶಾದ್ಯಂತ 71 ದಶಲಕ್ಷಕ್ಕೂ ಹೆಚ್ಚು ಅನಿಲ ಗ್ರಾಹಕರನ್ನು ಹೊಂದಿದೆ. ಭಾರತ್ ಗ್ಯಾಸ್ ಪ್ರಕಾರ ಎಲ್‌ಪಿಜಿ ಗ್ರಾಹಕರು ತಮ್ಮ ಗ್ಯಾಸ್ ಸಿಲಿಂಡರ್‌ಗಳನ್ನು ವಾಟ್ಸಾಪ್ ಸಂಖ್ಯೆ 180022434 ನಲ್ಲಿ ಬುಕ್ ಮಾಡಬಹುದು.
ನೀವು ಮಾಡಬೇಕಾದ ಪ್ರಮುಖ ವಿಚಾರ ನೆನಪಿನಲ್ಲಿಡಿ, ಗ್ಯಾಸ್ ಏಜೆನ್ಸಿಯಲ್ಲಿ ನೋಂದಾಯಿಸಲಾಗಿರುವ ಫೋನ್ ಸಂಖ್ಯೆಯೊಂದಿಗೆ ಮಾತ್ರ ಈ ವಾಟ್ಸಾಪ್ ಸಂಖ್ಯೆಯಲ್ಲಿ ಗ್ಯಾಸ್ ಬುಕ್ ಮಾಡಬಹುದಾಗಿದೆ.
ವಾಟ್ಸಾಪ್‌ನಲ್ಲಿ ಸಿಲಿಂಡರ್ (Cylinder) ಅನ್ನು ಕಾಯ್ದಿರಿಸಿದ ನಂತರ ಗ್ರಾಹಕರ ಫೋನ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಅದರಲ್ಲಿ ಬುಕಿಂಗ್ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಈ ಸಂದೇಶದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಆನ್‌ಲೈನ್ ಪಾವತಿ ಮಾಡಲು ಲಿಂಕ್ ಇರುತ್ತದೆ. ಈ ಲಿಂಕ್‌ನಲ್ಲಿ ಗ್ರಾಹಕರು ಸಿಲಿಂಡರ್‌ನ ಬೆಲೆಯನ್ನು ಡೆಬಿಟ್, ಕ್ರೆಡಿಟ್, ಯುಪಿಐ ಅಥವಾ ಇತರ ಆನ್‌ಲೈನ್ ಪಾವತಿ ಪ್ಲ್ಯಾಟ್‌ಫಾರ್ಮ್‌ಗಳಿಂದ ಪಾವತಿಸಬಹುದು ಎಂದು ಕಂಪನಿ ವತಿಯಿಂದ ಮಾಹಿತಿ ನೀಡಲಾಗಿದೆ.