ಬೆಳ್ಳಾರೆ: ಲಾಕ್‌ಡೌನ್ ನಡುವೆ ‘ಟ್ರೀ ಹೌಸ್’ ನಿರ್ಮಿಸಿದ ನಾಲ್ವರು ಪುಟ್ಟ ಮಕ್ಕಳು ➤ ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಲೆದೂಗಿದ ನಾಗರಿಕರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.10. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತು ಏನು ಮಾಡಬೇಕೆಂದು ಕೆಲವರಿಗೆ ತೋಚುವುದೇ ಇಲ್ಲ. ಅಂತಹದರಲ್ಲಿ ಮನೆಯಲ್ಲಿ ಕುಳಿತು ಕಾಲಹರಣ ಮಾಡಬೇಕಿದ್ದ ನಾಲ್ವರು ವಿದ್ಯಾರ್ಥಿಗಳು ಮರದ ಮೇಲೊಂದು ಟ್ರೀ ಹೌಸ್ ನಿರ್ಮಿಸುವ ಮೂಲಕ ಸುದ್ದಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತಡಗಜೆ ನಿವಾಸಿಗಳಾದ ಭವೀಷ್, ಆಕಾಶ್, ಆತ್ಮಿಕ್, ಭಕ್ತಿ ಎಂಬವರು ಸೇರಿಕೊಂಡು ಟ್ರೀ ಹೌಸ್ ನಿರ್ಮಿಸಿದ್ದಾರೆ. ಕಳೆದ ಮೂರು ವಾರಗಳ ಕಾಲ ಪುಟ್ಟ ಮಕ್ಕಳೇ ಸೇರಿ ನಿರ್ಮಿಸಿದ ಟ್ರೀ ಹೌಸ್ ಕೆಲಸವು ಪೂರ್ತಿಯಾಗಿದ್ದು, ಭಾನುವಾರದಂದು ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಹಿರಿಯರಾದ ಸತ್ಯನಾರಾಯಣ ಎಂಬವರು ರಿಬ್ಬನ್ ತುಂಡರಿಸುವ ಮೂಲಕ ಮರದ ಮನೆಯನ್ನು ಉದ್ಘಾಟಿಸಿದರು. ಆ ಬಳಿಕ ಗಣ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲರಿಗೂ ತಂಪು‌ ಪಾನೀಯದ ವ್ಯವಸ್ಥೆ ಕಲ್ಪಿಸಲಾಗಿತ್ತು. ತಡಗಜೆ ಪರಿಸರದ ಹಲವರು ಆಗಮಿಸಿ ವಿದ್ಯಾರ್ಥಿಗಳ ನೂತನ ಪ್ರಯತ್ನಕ್ಕೆ ಶುಭಹಾರೈಸಿದರು.

Also Read  ಮಹಿಳಾ ಮತ್ತು ಪುರುಷ ಡ್ರೈವರ್‌ ಕೆಲಸಕ್ಕೆ ಅರ್ಜಿ ಅಹ್ವಾನ ➤ 1.37 ಲಕ್ಷ ಸ್ಯಾಲರಿಯ ಈ ಉದ್ಯೋಗದ ಬಗ್ಗೆ ನಿಮಗೆ ಗೊತ್ತೇ..?

error: Content is protected !!
Scroll to Top