1.ದಿನ ನಿತ್ಯ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಮೈಗ್ರೇನ್ ಪದೇ ಪದೇ ಬರುವುದು ಕಡಿಮೆಯಾಗುತ್ತದೆ.
2.ನುಗ್ಗೆ ಸೊಪ್ಪಿನ ರಸ ಸೇವಿಸುವುದರಿಂದ ಮಧುಮೇಹವನ್ನು ಹತೋಟಿಯಲ್ಲಿಡಬಹುದು
3.ಜಾಯಿಕಾಯಿ ಪುಡಿಯನ್ನು ನೀರಲ್ಲಿ ಕಲಸಿ ಹಣೆಗೆ ಲೇಪ ಮಾಡಿದರೆ ತಲೆನೋವು ನಿವಾರಣೆಯಾಗುತ್ತದೆ.
4. ಹಣ್ಣುಗಳನ್ನು ಊಟದ ಮೊದಲು ತಿನ್ನೋದ್ರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
5.ಬೆಳಗಿನ ಉಪಹಾರ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಬೆಳಿಗ್ಗೆ ಉತ್ತಮ ಉಪಹಾರ ಮಾಡುವವರು, ಇತರರಿಗಿಂತ ಕಡಿಮೆ ಒತ್ತಡದಲ್ಲಿ ಇರುತ್ತಾರಂತೆ.
6. ದಿನನಿತ್ಯ 50ml ಬೀಟ್ರೂಟ್ ರಸ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
7.ವಾರದಲ್ಲಿ ಮೂರು ಬಾರಿ ಕಬ್ಬಿನ ರಸವನ್ನು ಸೇವಿಸಿದರೆ ಪಿತ್ತಕೋಶದ ಆರೋಗ್ಯವು ಚೆನ್ನಾಗಿರುತ್ತದೆ.
– ಅಜಿತ್ ಕೆ ಕೋಡಿಂಬಾಳ (ಪೌಷ್ಟಿಕಾಂಶ &ಆಹಾರ ತಜ್ಞರು)