(ನ್ಯೂಸ್ ಕಡಬ) newskadaba.com ಉತ್ತಮ ಆರೋಗ್ಯಕ್ಕೆ ಮನೆಮದ್ದು:
1. ಪ್ರತಿದಿನ ಖಾಲಿ ಹೊಟ್ಟೆಗೆ ಒಂದು ಚಮಚ ಕಪ್ಪು ಜೀರಿಗೆ ಮತ್ತು ಎರಡು ಹನಿ ಜೇನುತುಪ್ಪವನ್ನು ನೀರಿನಲ್ಲಿ ಕಲಸಿ ಸೇವಿಸಿದರೆ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
2. ನಿತ್ಯ ಅಡುಗೆಯಲ್ಲಿ ಒಂದು ಚಿಟಿಕೆಯಷ್ಟು ಇಂಗನ್ನು ಬಳಸಿದರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.
3. ನಿತ್ಯ ಕೊತ್ತಂಬರಿ ಬೀಜದ ನೀರನ್ನು ಕುಡಿದರೆ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
4. ಬಿಳಿ ಎಳ್ಳನ್ನು ನಿತ್ಯ ಸೇವಿಸುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡಬಹುದು.
5. ದಿನನಿತ್ಯ ನೆಲ್ಲಿಕಾಯಿ ಅಥವಾ ನೆಲ್ಲಿಕಾಯಿ ರಸ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು.
6. ಪ್ರತಿನಿತ್ಯ ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ.
7. ಹರಿವೆ ಸೊಪ್ಪು(ದಂಟಿನ ಸೊಪ್ಪು)ಅದರ ಬೀಜ ತಿನ್ನುವುದರಿಂದ ದೇಹದ ಕೊಲೆಸ್ಟ್ರಾಲನ್ನು ಕಡಿಮೆ ಮಾಡಬಹುದು.
ಆಹಾರ ಮತ್ತು ಪೌಷ್ಟಿಕಾಂಶ ಹಾಗೂ ಇನ್ನಿತರ ಆಹಾರಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಜಿತ್ ಕೆ. ಕೋಡಿಂಬಾಳ
ಪೌಷ್ಟಿಕಾಂಶ & ಆಹಾರ ತಜ್ಞರು ಮತ್ತು ಸಹಾಯಕ ಪ್ರಾಧ್ಯಾಪಕರು, ಆಹಾರ ಮತ್ತು ಪೋಷಣಾ ವಿಭಾಗ, ಎಸ್‌ಡಿಎಂ ಕಾಲೇಜ್ ಆಫ್ ನೇಚರೋಪತಿ & ಯೋಗಿಕ್ ಸೈನ್ಸಸ್ ಅಂಡ್ ಹಾಸ್ಪಿಟಲ್
8722611260
Email I’d: dietitianajith@gmail.com
Insta: nutri-clinic_dietitian
Facebook: Nutri clinic