ಉಪ್ಪಿನಂಗಡಿಯ ವಕೀಲರಿಗೆ ಕೊರೋನಾ ಸೋಂಕು ದೃಢ..!! ➤ ಸುಪ್ರೀಂ ಕೋರ್ಟ್‌ನಿಂದ ಹಿಂತಿರುಗಿ ಐಸೋಲೇಷನ್ ನಲ್ಲಿದ್ದ ವಕೀಲರು.!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.17. ಐಸೋಲೇಷನ್ ನಲ್ಲಿದ್ದ ಉಪ್ಪಿನಂಗಡಿ ನಿವಾಸಿಯೋರ್ವರಿಗೆ ಕೊರೋನಾ ಸೋಂಕು ಶುಕ್ರವಾರದಂದು ದೃಢಪಟ್ಟಿದೆ.

ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿದ್ದ ಉಪ್ಪಿನಂಗಡಿ ನಿವಾಸಿ ಇತ್ತೀಚೆಗೆ ದೆಹಲಿಯಿಂದ ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಐಸೋಲೇಷನ್ ನಲ್ಲಿದ್ದ ಅವರಿಗೆ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸ್ವತಃ ವಕೀಲರೇ ನ್ಯೂಸ್ ಕಡಬಕ್ಕೆ ಪ್ರತಿಕ್ರಿಯಿಸಿದ್ದಾರೆ.

Scroll to Top