ಕಂಬಳದ ಶ್ರೀನಿವಾಸ ಗೌಡರಿಗೆ ಮುಖ್ಯಮಂತ್ರಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com, ಮಂಗಳೂರು. ಫೆ.17. ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ವಿಶ್ವದ ಅತ್ಯಂತ ವೇಗದ ಓಟಗಾರ ಎನಿಸಿಕೊಂಡಿರುವ ಶ್ರೀನಿವಾಸ್ ಗೌಡ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಆಹ್ವಾನದ ಮೇರೆಗೆ ಮಧ್ಯಾಹ್ನ ಸುಮಾರು 2 ಗಂಟೆ ಹೊತ್ತಿಗೆ ಬೆಂಗಳೂರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.


ಶ್ರೀನಿವಾಸ ಗೌಡ ಅವರಿಗೆ ಕ್ರೀಡಾ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನ ಮಾಡಲಿದ್ದಾರೆ. ಕಂಬಳವೀರ ಶ್ರೀನಿವಾಸ ಗೌಡ ಅವರು ಈಗಾಗಲೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಗಮನ ಸೆಳೆದಿದ್ದು, ಅವರನ್ನು ಒಲಿಂಪಿಕ್ಸ್ಗೆ ಕಳಿಸುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Also Read  ಪಟಾಕಿ ಅಂಗಡಿಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ ➤ ಮಾರ್ಗಸೂಚಿಯಲ್ಲಿ ಏನಿದೆ ಗೊತ್ತೇ.!

error: Content is protected !!
Scroll to Top