ಬಸ್ ಓಡಿಸುತ್ತಿದ್ದ ವೇಳೆ ಹೃದಯಾಘಾತ ➤ ತನ್ನ ಪ್ರಾಣ ಬಿಟ್ಟು ಪ್ರಯಾಣಿಕರ ಜೀವ ಉಳಿಸಿದ ಚಾಲಕ

(ನ್ಯೂಸ್ ಕಡಬ) newskadaba.com, ಶಿವಮೊಗ್ಗ. ಫೆ.6. ಬಸ್ ಓಡಿಸುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ, ಪ್ರಯಾಣಿಕರ ಜೀವ ಉಳಿಸಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.

ಹೃದಯಾಘಾತವಾಗಿ ಮೃತಪಟ್ಟ ಬಸ್ ಚಾಲಕನನ್ನು ಶಿಕಾರಿಪುರ ತಾಲೂಕಿನ ಬಗನಕಟ್ಟೆ ನಿವಾಸಿ ಕುಮಾರ್(32) ಎಂದು ಗುರುತಿಸಲಾಗಿದೆ. ಇವರು ಕುಮದ್ವತಿ ಟ್ರಾವೆಲ್ಸ್ ಗೆ ಸೇರಿದ್ದ ಬಸ್ ಚಾಲಕರಾಗಿದ್ದು, ಬಸ್ ಶಿಕಾರಿಪುರದಿಂದ ಹೊನ್ನಾಳಿಗೆ ಹೋಗುತ್ತಿದ್ದ ವೇಳೆ ಬಸ್ ಚಾಲನೆ ಮಾಡುತ್ತಿದ್ದ ಸಮಯದಲ್ಲೇ ಚಾಲಕ ಕುಮಾರ್ ಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.

ಈ ಸಂದರ್ಭದಲ್ಲಿ ತನ್ನ ಪರಿಸ್ಥಿತಿ ಅರಿತ ಚಾಲಕ ಬಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾನೆ. ಬಸ್ಸನ್ನು ನಿಲ್ಲಿಸಲು ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಆದರೆ ಚಾಲಕ ಮೃತಪಟ್ಟಿದ್ದಾನೆ.

Also Read  ಬೆಂಗಳೂರಿನ ಏರ್ ಪೋರ್ಟ್ ನಲ್ಲಿ 8 ಕೆ.ಜಿ ಗಾಂಜಾ ಜಪ್ತಿ

error: Content is protected !!
Scroll to Top