ಕಾಸರಗೋಡು: ಅಕ್ರಮ ಹಣ ಸಾಗಾಟ; ಓರ್ವ ಬಂಧನ

ಕಾಸರಗೋಡು, ಜ.28: ದಾಖಲೆಗಳಿಲ್ಲದ ಸುಮಾರು 15 ಲಕ್ಷ ರೂಪಾಯಿ ಹಣವನ್ನು ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತನನ್ನು ಕಣ್ಣೂರಿನ ಮುಹಮ್ಮದ್ ಕುಂಞಿ (33) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡಲಾಗುತ್ತಿತ್ತು. ವಾಹನ ತಪಾಸಣೆ ವೇಳೆ ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ.‌ ಕಂಕನಾಡಿಯಿಂದ ಓರ್ವ ವ್ಯಕ್ತಿ ಕಣ್ಣೂರು ತಳಿಪರಂಬದಲ್ಲಿರುವ ವ್ಯಕ್ತಿಯೋರ್ವರಿಗೆ ನೀಡಲು ಈ ಹಣ ಒಪ್ಪಿಸಿದ್ದಾಗಿ ಬಂಧಿತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಕಡಬ: ಬೈಕ್ ಗೆ ಢಿಕ್ಕಿ ಹೊಡೆದು ಪರಾರಿಯಾದ ಕಾರು - ಸವಾರನಿಗೆ ಗಾಯ

error: Content is protected !!
Scroll to Top