ಕಾಸರಗೋಡು: ಸಹ ಶಿಕ್ಷಕನಿಂದಲೇ ಶಿಕ್ಷಕಿಯ ಕೊಲೆ; ಕ್ರೈಂ ಬ್ರಾಂಚ್ ತನಿಖೆಯಿಂದ ಬಹಿರಂಗ

  • ಇಬ್ಬರ ಬಂಧನ

ಕಾಸರಗೋಡು, ಜ.24: ಮೀಯಪದವು ವಿದ್ಯಾವಿರ್ಧಕ ಹಯರ್ ಸೆಕಂಡರಿ ಶಾಲೆಯ ಶಿಕ್ಷಕಿ ರೂಪಶ್ರೀ (44) ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹ ಶಿಕ್ಷಕ ಸೇರಿದಂತೆ ಇಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಾಲೆಯ ಡ್ರಾಯಿಂಗ್ ಶಿಕ್ಷಕ ವೆಂಕಟರಮಣ ಕಾರಂತ (50) ಮತ್ತು ಕಾರು ಚಾಲಕ ನಿರಂಜನ ಎಂದು ಗುರುತಿಸಲಾಗಿದೆ.

ಜನವರಿ 14ರ ಸಂಜೆಯಿಂದ ಶಿಕ್ಷಕಿ ರೂಪಶ್ರೀ ನಾಪತ್ತೆಯಾಗಿದ್ದಳು. 16 ರಂದು ಕುಂಬಳೆ ಸಮೀಪದ ಪೆರುವಾಡು ಕಡಲ ತೀರದಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ಆದರೆ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದರು.

ನಾಗರಿಕರು , ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು . ಕೊನೆಗೂ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಿದ್ದರು. ಕ್ರೈಮ್ ಬ್ರಾಂಚ್ ಮೂರು ದಿನಗಳಲ್ಲೇ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೂಪಾಶ್ರೀ ಶಿಕ್ಷಕಿಯಾಗಿರುವ ಅದೇ ಶಾಲೆಯಲ್ಲಿ ಶಿಕ್ಷಕನಾಗಿದ್ದ ವೆಂಕಟರಮಣ ಈ ಕೃತ್ಯ ನಡೆಸಿದ್ದು, ಜ.14 ರಂದು ರೂಪಾಶ್ರೀಯನ್ನು ಮನೆಗೆ ಕರೆಸಿ ಬಕೆಟ್ ನಲ್ಲಿ ಮುಖ ಮುಳುಗಿಸಿ ಕೊಲೆಗೈದ್ದಿದ್ದು , ಬಳಿಕ ಮೃತದೇಹವನ್ನು ನಿರಂಜನ್ ನ ಸಹಾಯದಿಂದ ಕಾರಿನಲ್ಲಿ ಕುಂಬಳೆ ಶಿರಿಯ ಹೊಳೆಗೆ ಕೊಂಡೊಯ್ದು ಎಸೆದಿದ್ದರು.

Also Read  ಸುಳ್ಯ: ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಕ್ರೈಂ ಬ್ರಾಂಚ್ ಪೊಲೀಸರು, ಫಾರೆನ್ಸಿಕ್ ತಜ್ಞರು ಮನೆ ಮತ್ತು ಕಾರನ್ನು ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ರೂಪಾಶ್ರೀ ಯ ತಲೆಗೂದಲು ಲಭಿಸಿದ್ದು , ಈ ಹಿನ್ನಲೆಯಲ್ಲಿ ವೆಂಕಟರಮಣನನ್ನು ಹೆಚ್ಚಿನ ತನಿಖೆ ಗೊಳಪಡಿಸಿದಾಗ ತಾನೇ ಕೊಲೆಗೈದುದಾಗಿ ಬಾಯ್ಬಿಟ್ಟಿದ್ದಾನೆ.

ರೂಪಶ್ರೀ ಮತ್ತು ವೆಂಕಟರಮಣ ನಡುವೆ ಸ್ನೇಹ ಇತ್ತು ಎನ್ನಲಾಗಿದ್ದು ಆರ್ಥಿಕ ಹಾಗೂ ಇನ್ನಿತರ ವ್ಯವಹಾರಗಳು ನಡೆದಿದ್ದವು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ವೆಂಕಟರಮಣ ನಡುವೆ ಇದ್ದ ಸ್ನೇಹ, ವ್ಯವಹಾರ ಬಳಿಕ ರೂಪಾಶ್ರೀಗೆ ಹೊರೆಯಾಗಿ ಪರಿಣಮಿಸಿತ್ತು. ಕೆಲ ಸಮಯದಿಂದ ಇಬ್ಬರ ನಡುವೆ ವೈಮಸ್ಸು ಉಂಟಾಗಿ ಈ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೆ ಕೊಲೆಗೆ ಬೇರೆ ಯಾವುದಾದರೂ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆಯಿಂದ ಸ್ಪಷಗೊಳ್ಳಬೇಕಿದೆ ಎಂದು ತನಿಖಾ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

Also Read  ಮಂಗಳೂರು: ಸಿಎಂ ಗೆ ತಪ್ಪಿನ ಅರಿವಾದಂತಿದೆ-ಸಂಸದ ಚೌಟ

ರೂಪಾಶ್ರೀ ನಾಪತ್ತೆಯಾದ ದಿನದಿಂದಲೇ ಮಂಜೇಶ್ವರ ಪೊಲೀಸರಿಗೆ ಲಭಿಸಿದ ದೂರಿನಂತೆ ವೆಂಕಟರಮಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು . ಆದರೆ ಯಾವುದೇ ಸುಳಿವು ಈತನಿಂದ ಲಭಿಸಿರಲಿಲ್ಲ. ಬಳಿಕ ಮೃತದೇಹ ಪತ್ತೆಯಾದ ದಿನವೂ ವಿಚಾರಣೆಗೆ ಒಳಪಡಿಸಲಾಗಿತ್ತು ಆದರೂ ಈತನ ಭಾಗಿಯಾದ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ವಿಫಲಗೊಂಡಿದ್ದರು . ಕೊನೆಗೆ ಕ್ರೈಂ ಬ್ರಾಂಚ್ ತನಿಖೆಯಿಂದ ಕೃತ್ಯ ಬಯಲಿಗೆ ಬರುವಂತೆ ಮಾಡಿದೆ.

error: Content is protected !!
Scroll to Top