ಕಡಬ: ಮೈದುನನಿಂದ ಆ್ಯಸಿಡ್ ದಾಳಿ ➤ ಮಹಿಳೆ ಮತ್ತು ಮಗು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜ.24. ಹಣಕಾಸು ಹಾಗೂ ಭೂ ವಿವಾದಕ್ಕೆ ಸಂಬಂಧಿಸಿ ಮಹಿಳೆಯೋರ್ವರ ಮುಖಕ್ಕೆ ಆಕೆಯ ಬಾವ ಆ್ಯಸಿಡ್ ಎರಚಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಆಸಿಡ್ ಎರಚಿದ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಜಯಾನಂದ ತನ್ನ ತಮ್ಮನ ಪತ್ನಿ ವಿಧವೆ ಸ್ವಪ್ನಾ(35) ಹಾಗೂ ಆಕೆಯ ಹೆಣ್ಣುಮಗಳ ಮುಖಕ್ಕೆ ರಬ್ಬರ್ ಶೀಟ್ ಗೆ ಬಳಸುವ ಆ್ಯಸಿಡ್ ಎರಚಿದ್ದಾರೆ‌. ಗಾಯಗೊಂಡಿರುವ ತಾಯಿ ಮಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಜಯಾನಂದ ಕೊಠಾರಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

Also Read  ಮಂಗಳೂರು: ನೂತನ ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ  ಆದ್ಯತೆ

error: Content is protected !!
Scroll to Top