ಇಂದು ಪರೀಕ್ಷಾ ಪೆ ಚರ್ಚಾ

(ನ್ಯೂಸ್ ಕಡಬ) newskadaba.com, ಹೊಸದಿಲ್ಲಿ, ಜ.20    ಹೊಸದಿಲ್ಲಿಯಲ್ಲಿ ಇಂದು ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ನಡೆಸುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು ನಡೆಯಲಿದೆ.


ಪರೀಕ್ಷಾ ಸಮಯ ಹತ್ತಿರ ಬರುತ್ತಿರುವ ಕಾರಣ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ನಡೆಸುತ್ತಿದ್ಧಾರೆ. ಇಂದಿನ ಪರಿಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ದೇಶದ ವಿವಿಧ ಶಾಲೆಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹೊಸದಿಲ್ಲಿಯ ಟಲ್ಕಟೊರಾ ಸ್ಟೇಡಿಯಂನಲ್ಲಿ ಇಂದು 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ನರೇಂದ್ರ ಮೋದಿಯವರು 2017ರಲ್ಲಿ ಜಾರಿಗೆ ತಂದ ಕಾರ್ಯಕ್ರಮವನ್ನು ಇದೀಗ ಮೂರನೇ ಬಾರಿ ನಡೆಸುತ್ತಿದ್ದಾರೆ.

Also Read  ಇನ್ಸ್ಟಾಗ್ರಾಮ್ ನಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್ ➤ ಯುವಕನೋರ್ವನ ವಿರುದ್ಧ ಕೇಸ್ ದಾಖಲು

error: Content is protected !!
Scroll to Top