200ರೂ ಹೊಸ ನೋಟಿಗೆ ಇಂದು ಚಾಲನೆ ► ಜನರಿಗೆ ಸಿಗಲಿದೆ 200 ರೂ. ಗರಿ ಗರಿ ನೋಟು

(ನ್ಯೂಸ್ ಕಡಬ) newskadaba.com ನವದೆಹಲಿ ಆ.25, ಬಹು ದಿನಗಳಿಂದ 200 ರೂಪಾಯಿ ನೋಟು ಪೂರೈಕೆ ಬಗ್ಗೆ ಸುದ್ದಿಯಾಗಿತ್ತು. ಗಣೇಶ ಹಬ್ಬದ ದಿನವಾದ ಇಂದು 200 ರುಪಾಯಿ ಮುಖಬೆಲೆಯ ಹೊಸ ನೋಟುಗಳು ಬ್ಯಾಂಕ್‍ಗಳಿಗೆ ಪೂರೈಕೆ ಆಗಲಿದೆ.

ಪ್ರಾರಂಭದಲ್ಲಿ ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಹೊಸ 200 ರೂ. ನೋಟು ವಿತರಣೆಯಾಗಲಿದೆ. ಶುಕ್ರವಾರದಿಂದ 3 ದಿನ ಸರ್ಕಾರಿ ರಜೆ ಇರುವುದರಿಂದ ಸೋಮವಾರದಿಂದ ಹೊಸ ನೋಟು ಸಿಗಲಿದೆ.

200ರ ನೋಟು ಕಡು ಹಳದಿ ಬಣ್ಣದಲ್ಲಿದ್ದು, ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದೆ. ದೇವನಾಗರಿಯಲ್ಲಿ 200 ರೂ. ನ ಮುದ್ರಣವಾಗಿದೆ. ನೋಟಿನ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರವಿದೆ. ಮೈಕ್ರೋ ಲಿಪಿಯಲ್ಲಿ ಆರ್‍ಬಿಐ, ಭಾರತ್, ಇಂಡಿಯಾ ಹಾಗೂ 200 ಮುದ್ರಣವಿದೆ. ಬಣ್ಣ ಬದಲಾಗುವಂತಹ ಸೆಕ್ಯೂರಿಟಿ ಥ್ರೆಡ್ ಇದ್ದು ಅದರ ಮೇಲೆ ಭಾರತ್ ಹಾಗೂ ಆರ್‍ಬಿಐ ಮುದ್ರಣವಿದೆ. ನೋಟನ್ನ ಸ್ವಲ್ಪ ತಿರುಗಿಸಿ ನೋಡಿದ್ರೆ ಈ ಥ್ರೆಡ್‍ನ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.

Also Read  ಮೂರು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ..!

ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭ, 200 ರ ವಾಟರ್‍ಮಾರ್ಕ್ ಇದೆ. ನೋಟಿನ ಮೇಲ್ಭಾಗದ ಎಡಗಡೆ ಹಾಗೂ ಕೆಳಭಾಗದ ಬಲಗಡೆಯಲ್ಲಿ ನಂಬರ್ ಪ್ಯಾನಲ್ ಇದ್ದು, ನಂಬರ್‍ಗಳು ಸಣ್ಣದರಿಂದ ದೊಡ್ಡ ಗಾತ್ರಕ್ಕೆ ಮುದ್ರಣವಾಗಿರಲಿದೆ. ಅಂಧರಿಗೆ ಅನುಕೂಲವಾಗುವಂತೆ ಮಹಾತ್ಮಾ ಗಾಂಧಿ ಹಾಗೂ ಅಶೋಕ ಸ್ತಂಭದ ಉಬ್ಬಿದ ಮುದ್ರಣವಿದೆ. ‘ಹೆಚ್’ ಅಕ್ಷರದ ಉಬ್ಬಿದ ಗುರುತು ಇದೆ. ಎಡ ಹಾಗೂ ಬಲ ಭಾಗದಲ್ಲಿ ಆಂಗುಲರ್ ಬ್ಲೀಡ್ ಲೈನ್‍ಗಳಿದ್ದು, ಲೈನ್‍ಗಳ ಮಧ್ಯೆ ಎರಡು ವೃತ್ತಗಳಿವೆ. ನೋಟಿನ ಹಿಂಭಾಗದಲ್ಲಿ ಮುದ್ರಣದ ವರ್ಷ ಹಾಗೂ ಸ್ವಚ್ಛ ಭಾರತ ಲಾಂಛನವಿದೆ. ಅಲ್ಲದೆ ನೋಟಿನ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಜಾಮಿಟ್ರಿಕ್ ಪ್ಯಾಟ್ರನ್ ಹಾಗೂ ಇತರೆ ಡಿಸೈನ್‍ಗಳಿವೆ. ನೋಟಿನ ಮೇಲೆ ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ. ಏನೆ ಆಗಲಿ ಇನ್ನು ಮುಂದೆ ಚಿಲ್ಲರೆ ಸಮಸ್ಯೆ ಅಂತು ಬಗೆಹರಿಯಲಿದೆ ಅಂತ ಆರ್‍ಬಿಐ ಹೇಳಿದೆ.

Also Read  ಪಟಾಕಿ ಅವಾಂತರ..!!! ► ಬಾಲಕನ 2 ಕಣ್ಣು ಹಾಗೂ ಕೈ ಕಾಲುಗಳಿಗೆ ಗಂಭೀರ ಗಾಯ

 

error: Content is protected !!
Scroll to Top