ಉಪ್ಪಿನಂಗಡಿ: ಕೋಳಿ ಸಾಗಾಟದ ವಾಹನ ಪಲ್ಟಿ ➤ ನೂರಾರು ಕೋಳಿಗಳ ಸಾವು



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.17. ಕೋಳಿ ಸಾಗಾಟದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಟ್ಟಿಯಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.





ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಈಚರ್ ಲಾರಿಯು ಪೆರ್ನೆ ಸಮೀಪದ ದೋರ್ಮೆ ಮಸೀದಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ವಾಹನ ನಜ್ಜುಗುಜ್ಜಾಗಿದ್ದು, 200 ಕ್ಕೂ ಅಧಿಕ ಕೋಳಿಗಳು ಸಾವಿಗೀಡಾಗಿವೆ. ಉಳಿದ ಕೋಳಿಗಳನ್ನು ಬೇರೆ ವಾಹನದ ಮೂಲಕ ಸಾಗಿಸಲಾಗಿದೆ.






error: Content is protected !!
Scroll to Top