ದೇರಳಕಟ್ಟೆ: 2500 ಚಯರ್ ತುಂಬಿಸಿಟ್ಟಿದ್ದ ಲಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ➤ ಲಾರಿ ಸಂಪೂರ್ಣ ಸುಟ್ಟು ಕರಕಲು – ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ದೇರಳಕಟ್ಟೆ, ಜ.13. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಭಾನುವಾರದಂದು ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಬಳಸಲಾಗಿದ್ದ 2,500 ಕುರ್ಚಿಗಳಿಗೆ ಹಾಗೂ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿ ನಡೆದಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾನುವಾರ ದೇರಳಕಟ್ಟೆಯಲ್ಲಿ ಪೌರತ್ವ ಸಂರಕ್ಷಣಾ ಸಮಿತಿಯ ವತಿಯಿಂದ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಲಾಗಿತ್ತು. ರ್ಯಾಲಿ ಮುಗಿದ ನಂತರ, 2500 ಕುರ್ಚಿಗಳನ್ನು ಐಷರ್ ವಾಹನಕ್ಕೆ ತುಂಬಿಸಿಡಲಾಗಿತ್ತು. ಕುರ್ಚಿಗಳು ಮತ್ತು ಅವುಗಳನ್ನು ಲೋಡ್ ಮಾಡಿದ ವಾಹನಕ್ಕೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

Also Read  ಬಸ್ ಗೆ ಹತ್ತುವ ವೇಳೆ ನಿಯಂತ್ರಣ ತಪ್ಪಿ ಚಕ್ರದಡಿಗೆ ಬಿದ್ದು ವ್ಯಕ್ತಿ ಮೃತ್ಯು...!

error: Content is protected !!
Scroll to Top