ಕೆಟ್ಟು ನಿಂತಿದ್ದ ಲಾರಿ ಏಕಾಏಕಿ ಚಲಿಸಿ ರಿಕ್ಷಾಕ್ಕೆ ಢಿಕ್ಕಿ

(ನ್ಯೂಸ್ ಕಡಬ) newskadaba.com ವಿಟ್ಲ, ಜ.09. ಕೆಟ್ಟು ನಿಂತಿದ್ದ ಲಾರಿಯೊಂದು ಹಠಾತ್ತನೆ ಚಲಿಸಿದ ಪರಿಣಾಮ ಎದುರಗಡೆ ನಿಲ್ಲಿಸಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ನಡೆದಿದೆ.

ಲಾರಿಯೊಂದು ಕೆಟ್ಟು ಹೋದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಲಾರಿಯನ್ನು ದುರಸ್ತಿ ಮಾಡಲೆಂದು ಮೆಕ್ಯಾನಿಕ್ ಆಟೋ ರಿಕ್ಷಾದಲ್ಲಿ ಆಗಮಿಸಿದ್ದರು. ದುರಸ್ತಿ ವೇಳೆ ಲಾರಿ ಹಠಾತ್ತನೆ ಚಲಿಸಿ ಎದುರುಗಡೆ ಇದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾವನ್ನು ದೂಡಿಕೊಂಡು ಹೋಗಿ ಮರಕ್ಕೆ ಢಿಕ್ಕಿ ಹೊಡೆದಿದೆ. ಆಟೋ ರಿಕ್ಷಾದಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ರಿಕ್ಷಾ ಮಾತ್ರ ನಜ್ಜುಗುಜ್ಜಾಗಿದೆ.

Also Read  ಮಂಡ್ಯ: ಮಹಡಿಯಿಂದ ಬಿದ್ದು ಹೆಣ್ಣು ಮಗು ಮೃತ್ಯು

error: Content is protected !!
Scroll to Top