ಶಿರಾಡಿ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್‌ ಬೆಂಕಿ ➤ ನೋಡನೋಡುತ್ತಿದ್ದಂತೆಯೇ ಸುಟ್ಟು ಕರಕಲಾದ ಕಾರು



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ.04. ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್‌ ಬೆಂಕಿ ಉಂಟಾಗಿ ಕಾರು ಸುಟ್ಟು ಭಸ್ಮವಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಬಳಿಯ ಕೊಡ್ಯಕಲ್ ಎಂಬಲ್ಲಿ ಶನಿವಾರದಂದು ನಡೆದಿದೆ.





ಕಡಬ ತಾಲೂಕಿನ ರಾಮಕುಂಜ ನಿವಾಸಿ ಪ್ರವೀಣ್ ಎಂಬವರು ತನ್ನ ಮಾರುತಿ 800 ಕಾರಿನಲ್ಲಿ ಸಕಲೇಶಪುರ ಕಡೆಯಿಂದ ತನ್ನ ಮನೆಗೆ ಆಗಮಿಸುತ್ತಿದ್ದ ವೇಳೆ ಶಿರಾಡಿಯ ಕೊಡ್ಯಾಕಲ್ ಎಂಬಲ್ಲಿ ಶಾರ್ಟ್ ಸರ್ಕ್ಯುಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಪ್ರವೀಣ್ ಕಾರಿನಿಂದ ಇಳಿದಿದ್ದಾರೆ. ನೋಡನೋಡುತ್ತಿದ್ದಂತೆಯೇ ಕಾರು ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾಗಿದೆ. ಅಂಬುಲೆನ್ಸ್ ಚಾಲಕ ವಿಜು, ಪರಶುರಾಮ ಗಾಣದ ಮಾಲಕ ಶುಭಾಶ್ ಹಾಗೂ ನೆಲ್ಯಾಡಿ ಹೊರಠಾಣೆಯ ಪೋಲಿಸ್ ಸಿಬ್ಬಂದಿಗಳು ಸೇರಿ ಬೆಂಕಿಯನ್ನು ನಂದಿಸಿದರು.






error: Content is protected !!
Scroll to Top