ಆಧಾರ್-ಪ್ಯಾನ್ ಲಿಂಕ್: ಮಾರ್ಚ್ ಗೆ ಅಂತಿಮ ಗಡುವು ವಿಸ್ತರಣೆ

ಹೊಸದಿಲ್ಲಿ, ಡಿ.31: ಆಧಾರ್‌ ಸಂಖ್ಯೆ ಜೊತೆ ಪ್ಯಾನ್‌ ಕಾರ್ಡ್ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಣೆ ಮಾಡಿದ್ದು, 2020ರ ಮಾರ್ಚ್ ತಿಂಗಳಿಗೆ ವಿಸ್ತರಣೆ ಮಾಡಿದೆ.

ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಡಿಸೆಂಬರ್‌ 31ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಲು ಸೂಚಿಸಲಾಗಿತ್ತು. ಇದೀಗ ಈ ಗಡುವನ್ನು ಡಿಸೆಂಬರ್‌ 31ರಿಂದ ಮಾರ್ಚ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಇಂದು ನಡೆದ ಹಣಕಾಸು ಸಚಿವಾವಲಯದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆಧಾರ್‌ ಜೊತೆ ಪ್ಯಾನ್‌ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ. ಈ ಮೊದಲು ಪ್ಯಾನ್‌-ಆಧಾರ್‌ ಜೋಡಣೆಗೆ 2019ರ ಡಿಸೆಂಬರ್ 31 ಕಡೆಯ ದಿನವಾಗಿತ್ತು.

Also Read  ಸುಳ್ಯ: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು ► ಶಾಮಿಯಾನ ಹಾಕುತ್ತಿದ್ದ ವೇಳೆ ದುರ್ಘಟನೆ

error: Content is protected !!
Scroll to Top