ನಾಳೆಯಿಂದಲೇ (ಡಿ.03) ದುಬಾರಿಯಾಗಲಿವೆ ಮೊಬೈಲ್ ಕರೆ ದರಗಳು ➤ ಯಾವೆಲ್ಲಾ ಕಂಪೆನಿಯ ದರಗಳು ಹೆಚ್ಚಲಿವೆ ಗೊತ್ತೇ..?

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.02. ಇಷ್ಟರವರೆಗೆ ಬೇಕಾಬಿಟ್ಟಿಯಾಗಿ ಉಪಯೋಗಿಸುತ್ತಿದ್ದ ಮೊಬೈಲ್ ಕರೆಗಳು ನಾಳೆಯಿಂದ (ಡಿ.03) ರಿಂದ ದುಬಾರಿಯಾಗಲಿದ್ದು, ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಕರೆ ಮತ್ತು ಡಾಟಾ ಪ್ಲಾನ್ ದರಗಳನ್ನು ಶೇ.42ರಷ್ಟು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್ ಸಂಸ್ಥೆಯು ಪ್ರಕಟಿಸಿದೆ.

ಈಗಾಗಲೇ ವೊಡಾಫೋನ್ ಮತ್ತು ಐಡಿಯಾ ತನ್ನ ದರಗಳಲ್ಲಿ ಹೆಚ್ಚಳವನ್ನು ಪ್ರಕಟಿಸಿದ್ದು, ಇದರ ಬೆನ್ನಿಗೇ ಏರ್‌ಟೆಲ್‌ನ ಕೂಡಾ ತನ್ನ ಕರೆದರವನ್ನು ಹೆಚ್ಚಳಗೊಳಿಸಲು ಮುಂದಾಗಿದೆ. ಅಲ್ಲದೆ ಡಿಸೆಂಬರ್ 6ರಿಂದ ರಿಲಯನ್ಸ್ ಜಿಯೋ ಕೂಡ ತನ್ನ ಮೊಬೈಲ್ ಸೇವೆಯ ದರಗಳನ್ನು ಹೆಚ್ಚಿಸಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇಷ್ಟರವರೆಗೆ ಬೇಕಾಬಿಟ್ಟಿ ಉಚಿತ ಕರೆ ಮಾಡುತ್ತಿದ್ದವರಿಗೆ ಮೊಬೈಲ್ ಕಂಪೆನಿಗಳ ಕರೆಗಳ ಮೇಲೆ ವಿಧಿಸಿರುವ ದರ ಹೆಚ್ಚಳದಿಂದ ಭಾರೀ ಕಷ್ಟ ಅನುಭವಿಸುವಂತಾಗಿದೆ.

Also Read  ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

error: Content is protected !!
Scroll to Top