ಅಯೋಧ್ಯೆ ಅರ್ಜಿ ಮರುಪರಿಶೀಲನೆ ಬೇಡ: ಸುನ್ನೀ ವಕ್ಫ್ ಬೋರ್ಡ್

(ನ್ಯೂಸ್ ಕಡಬ) newskadaba.com, ಹೊಸದಿಲ್ಲಿ, ನ.26. ಇತ್ತೀಚೆಗೆ ಪ್ರಕಟವಾದ ಅಯೋಧ್ಯೆ ತೀರ್ಪನ್ನು ಸುನ್ನೀ ವಕ್ಫ್ ಬೋರ್ಡ್ ನ ಸದಸ್ಯರ ತಂಡವು ಸಭೆ ಸೇರಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸದೇ ಇರಲು ನಿರ್ಧಾರವನ್ನು ಕೈಗೊಂಡಿದ್ದಾರೆ.

 

ಅಯೋಧ್ಯೆ ಭೂಮಿಯ ಐತಿಹಾಸಿಕ ತೀರ್ಪು ನೀಡಿದ ಪಂಚ ಪೀಠ ಸದಸ್ಯರಲ್ಲಿ ಒಬ್ಬರಾದ ರಂಜನ್ ಗೊಗೊಯ್  ನೇತೃತ್ವದ ಸುಪ್ರೀಂ ಪೀಠ  ವಿವಾದಿತ ಅಯೋಧ್ಯೆ ಭೂಮಿಯ 2.77 ಎಕರೆ ಜಾಗವು ರಾಮಲಲ್ಲಾಗೆ ಸೇರಬೇಕು ಎಂದು ತೀರ್ಪು ನೀಡಿತ್ತು. ಇಂದು ಸಭೇ ಸೇರಿದ್ದ ಸುನ್ನೀ ವಕ್ಫ್ ಬೋರ್ಡ್ ನ ಏಳು ಸದಸ್ಯರಲ್ಲಿ ಆರು ಮಂದಿ ಮರುಪರಿಶೀಲನೆ ಅರ್ಜಿ ಸಲ್ಲಿಸದೇ ಇರಲು ತೀರ್ಮಾನಿಸಿದರು.

Also Read  ಶಬರಿಮಲೆ ದೇವಸ್ಥಾನದ ಬಾಗಿಲನ್ನು 'ಕನ್ನಿಮಾಸ ಪೂಜೆಗಾಗಿ' ಮತ್ತೆ ಓಪನ್

error: Content is protected !!
Scroll to Top