ಶಬರಿಮಲೆ ದೇವಸ್ಥಾನ ಇಂದಿನಿಂದ ತೆರೆಯಲಿದೆ, ಮಹಿಳೆಯರಿಗೆ ಭದ್ರತೆಯ ಕೊರತೆ

(ನ್ಯೂಸ್ ಕಡಬ) newskadaba.com ಪತ್ತನಂತಿಟ್ಟ , ನ.16  ಕೇರಳದ ವಿಶ್ವ ಪ್ರಸಿದ್ದ ಶಬರಿಮಲೆ ದೇವಸ್ಥಾನ ಭಕ್ತರ ದರ್ಶನಕ್ಕೆ ಇಂದಿನಿಂದ ತೆರೆಯಲಿದೆ. ದೇವಸ್ಥಾನದ ಸುತ್ತ ಭಾರಿ ಭದ್ರತೆ ಒದಗಿಸಲಾಗಿದೆ.

ಶಬರಿ ಮಲೆಗೆ ಭೆಟಿ ನೀಡುವ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಅಂತಿಮ ನಿರ್ಣಯ ನೀಡುವವರೆಗೂ ರಕ್ಷಣೆ ನೀಡಲಾಗುವುದಿಲ್ಲ ಎಂದು ಕೇರಳದ ಸಚಿವರು ಹೇಳಿಕೆ ನೀಡಿದ್ದಾರೆ. ಸುಮಾರು ಹತ್ತು ಸಾವಿರ ಪೊಲೀಸರನ್ನು ಬೆಟ್ಟ ಮತ್ತು ದೇವಸ್ಥಾನದ ಸುತ್ತಮುತ್ತ ಅಹಿತಕರ ಘಟನೆಗಳನ್ನು ತಪ್ಪಿಸುವ ಸಲುವಾಗಿ ನಿಯೋಜನೆ ಮಾಡಲಾಗಿದೆ. ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು, ದೇವಸ್ಥಾನ ಪ್ರವೇಶಿಸಲು ಯತ್ನಿಸುವ ಮಹಿಳೆಯರಿಗೆ ಯಾವುದೇ ರಕ್ಷಣೆ ಒದಗಿಸಲಾಗುವುದಿಲ್ಲ ಎಂದಿದ್ದಾರೆ.

Also Read  ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಗಂಭೀರ

error: Content is protected !!
Scroll to Top