ಕಡಬದ ಅಡಿಗ ಟಿವಿಎಸ್ ನಲ್ಲಿ ಮೂರು ಹೊಸ ಮಾಡೆಲ್ ದ್ವಿಚಕ್ರ ವಾಹನಗಳ ಬಿಡುಗಡೆ ➤ 0% ಬಡ್ಡಿದರ, ಚೆಕ್ ಇಲ್ಲದೆ ಸಾಲ, 10 ಸಾವಿರ ರೂ‌. ಕ್ಯಾಶ್ ಬ್ಯಾಕ್ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.30. ತಾಲೂಕಿನ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಟಿವಿಎಸ್ ನಲ್ಲಿ ದೀಪಾವಳಿ ಹಬ್ಬದ ಕೊಡುಗೆಯಾಗಿ ಟಿವಿಎಸ್ ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಗೊಳಿಸಲಾಯಿತು. ಟಿವಿಎಸ್ ಎನ್ಟಾರ್ಕ್125 ರೇಸಿಂಗ್ ಎಡಿಷನ್, ಟಿವಿಎಸ್ ಜ್ಯೂಪಿಟರ್ ಗ್ರ್ಯಾಂಡ್ ಎಡಿಷನ್ ಮತ್ತು ಟಿವಿಎಸ್ ಎಕ್ಸೆಲ್100 ಸ್ಪೆಷಲ್ ಎಡಿಷನನ್ನು ಕಡಬದ ಖ್ಯಾತ ನ್ಯಾಯವಾದಿ ಹಾಗೂ ನೋಟರಿ ಶ್ರೀ ಮನೋಹರ ಸಬಳೂರು ಅವರು ಬಿಡುಗಡೆಗೊಳಿಸಿದರು. ಬಳಿಕ ಪ್ರಥಮ ಗ್ರಾಹಕರಾದ ಅನಿತ ಪಂಜ, ಶೇಷಪ್ಪ ಬಲ್ಯ, ಮತ್ತು ಬಾಲಕೃಷ್ಣ ಗೌಡ ಎಡಮಂಗಲ ಯವರಿಗೆ ಕೀಲಿ ಕೈ ಹಸ್ತಾಂತರಿಸಿದರು. ಸೇಲ್ಸ್ ವಿಭಾಗದ ಸಿಬಂಧಿಗಳಾದ ರಾಜೇಶ್, ಯೋಗೀಶ್, ಶುಭಲತಾ, ಟಿವಿಎಸ್ ಕ್ರೆಡಿಟ್ ವಿಭಾಗದ ದೀಪಾಶ್ರೀ ಹಾಗೂ ಸಂಸ್ಥೆಯ ಮಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪ್ರಥಮ ಖರೀದಿದಾರರಿಗೆ ಶುಭ ಹಾರೈಸಿದರು.

ದೀಪಾವಳಿ ಹಬ್ಬದ ಕೊಡುಗೆಗಳು “ಹಬ್ಬ ಹಂಗಾಮ” ನಡೆಯುತ್ತಿದ್ದು, ಅಕ್ಟೋಬರ್ 31ರ ತನಕ ಇರಲಿದೆ. ಟಿವಿಎಸ್ ನ ಎಲ್ಲಾ ದ್ವಿಚಕ್ರ ವಾಹನಗಳಿಗೆ ಹತ್ತು ಸಾವಿರ ರೂಪಾಯಿ ತನಕ ಕ್ಯಾಶ್ ಡಿಸ್ಕೌಂಟ್ ಇದ್ದು ಪ್ರತೀ ಖರೀದಿಯೊಂದಿಗೆ ಖಚಿತ ಉಡುಗೊರೆಗಳಿವೆ. ಷೋರೂಮ್ ನಲ್ಲೇ ಝೀರೋ ಪರ್ಸೆಂಟ್ ಬಡ್ಡಿ ದರದೊಂದಿದೆ ಚೆಕ್ಕ್ ರಹಿತ ಸಾಲ ಸೌಲಭ್ಯವಿದೆ. ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ವಾಹನದೊಂದಿದೆ ಅತುತ್ತಮ ಮಾರುಕಟ್ಟೆ ದರದಲ್ಲಿ ಎಕ್ಸ್ಚೇಂಜ್ ಮಾಡಬಹುದಾಗಿದ್ದು, ಎಲ್ಲಾ ವಿಧದ ಟಿವಿಎಸ್ ದ್ವಿಚಕ್ರ ವಾಹನಗಳು ಎಲ್ಲಾ ಬಣ್ಣಗಳಲ್ಲಿ ಲಭ್ಯವಿದೆ. ಜಿಲ್ಲೆಯ ಇತರ ಷೋರೂಮ್ ಗಳಿಗೆ ಹೋಲಿಸಿದರೆ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಕಡಿಮೆ ದರದಲ್ಲಿ ವಾಹನಗಳು ದೊರೆಯಲಿದ್ದು ಅತ್ಯುತ್ತಮ ಸರ್ವಿಸ್ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7618766636 ಅಥವಾ 08251-260260 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  Job News | ಕಡಬದಲ್ಲೇ ನಿಮಗಾಗಿ ಕಾಯ್ತಾ ಇದೆ ಹಲವು ಉದ್ಯೋಗಗಳು


ಎನ್ ಟಾರ್ಕ್ 125- ರೇಸಿಂಗ್ ಎಡಿಷನ್: ಹೊಸ ಎನ್ ಟಾರ್ಕ್ 125 ರೇಸಿಂಗ್ ಎಡಿಷನ್ ಹಲವಾರು ಕಾಸ್ಮೆಟಿಕ್ಸ್ ಹಾಗೂ ಅಪ್ಡೇಟ್ಸ್ ಗಳನ್ನ ಹೊಂದಿದೆ.
ಹೊಸ ಬಣ್ಣ ಹಾಗೂ ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಜೊತೆಗೆ ಹೊಸ ರೇಸ್ ಎಡಿಷನ್ ಎನ್ ಟಾರ್ಕ್ 125 ಸ್ಕೂಟರ್, ಸಂಪೂರ್ಣ ಹೊಸದಾದ ಡಿಸೈನ್ ನ LED ಹೆಡ್ ಲ್ಯಾಂಪ್ ಹಾಗೂ ಡಿರ್ಎಲ್ ನ್ನು ಹೊಂದಿದೆ. ಇದಲ್ಲದೆ ಟಿವಿಎಸ್ “ಸ್ಮಾರ್ಟ್ ಕನೆಕ್ಟ್ ” ತಂತ್ರಜ್ಞಾನದ ಬ್ಲೂಟೂತ್ ಕಾಂನೆಕ್ಟಿವಿಟಿ ಮುಖಂತರ ಕಾಲರ್ ಐಡಿ, ಮೆಸೇಜ್, ಜಿಪಿಎಸ್ ನೇವಿಗೇಶನ್, ಇನ್ನಿತರ ನೋಟಿಫಿಕೇಷನ್ ಗಳನ್ನು ವಾಹನದಲ್ಲಿ ತೋರಿಸುತ್ತದೆ.
ಟಿವಿಎಸ್ ಎನ್ಟಾರ್ಕ್ ತನ್ನ ತಂತಜ್ಞಾನ ಹೊರತಾಗಿ ಪರ್ಫಾರ್ಮೆನ್ಸ್ ನಿಂದ ಜನರ ಗಮನ ಸೆಳೆಲಿದೆ. ಹೊಸ ರೇಸಿಂಗ್ ಎಡಿಷನ್ ಆಕರ್ಷಕ ಬಾಡಿ ಗ್ರಾಫಿಕ್ಸ್ ಜೊತೆಗೆ ಮ್ಯಾಟ್ ಬ್ಲಾಕ್, ಗ್ಲೋಸ್ಸಿ ಬ್ಲಾಕ್ ಹಾಗೂ ಮ್ಯಾಟ್ ರೆಡ್ ಬಣ್ಣಗಳಲ್ಲಿ ಲಭ್ಯವಿದ್ದು ಏಕ್ಸ್-ಷೋರೂಮ್ ರೂಪಾಯಿ 69675 ಆಗಿರುತ್ತದೆ.

ಜ್ಯೂಪಿಟರ್ ಗ್ರ್ಯಾಂಡ್: ಟಿವಿಎಸ್ ತನ್ನ “ಸ್ಮಾರ್ಟ್‌ಕನೆಕ್ಟ್” ತಂತ್ರಜ್ಞಾನವನ್ನು ತನ್ನ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಜುಪಿಟರ್‌ಗೆ ಪರಿಚಯಿಸಿದೆ. ಅದುವೆ ಜ್ಯೂಪಿಟರ್ ಗ್ರ್ಯಾಂಡ್ ಎಡಿಷನ್. ಸ್ಮಾರ್ಟ್ ಕನೆಕ್ಟ್ ವೈಶಿಷ್ಟ್ಯವು, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಅನ್ನು ಸ್ಕೂಟರ್ನೊಂದಿಗೆ ಬ್ಲೂ ಟೂತ್ ಮೂಲಕ ಸಂಪರ್ಕಿಸುತ್ತದೆ ಮತ್ತು ಕರೆ ಹಾಗೂ sms ನ ಅಧಿಸೂಚನೆ, ಓವರ್ ಸ್ಪೀಡಿಂಗ್ ಅಲರ್ಟ್ ಮತ್ತು ಟ್ರಿಪ್ ವಿವರಗಳಂತಹ ವೈಶಿಷ್ಟ್ಯಗಳನ್ನು ಹೊಂದಿರುತದೆ. ಗ್ರ್ಯಾಂಡ್ ಆವೃತ್ತಿಯ ಇತರ ಪ್ರಮುಖ ವೈಶಿಷ್ಠತೆಗಳೆಂದರೆ ಪೂರ್ಣ LED ಹೆಡ್‌ಲ್ಯಾಂಪ್, ವಿಶೇಷ ಟೆಕ್ ಬ್ಲೂ ಕಲರ್ ಸ್ಕೀಮ್, ಫ್ರಂಟ್ ಫೆಂಡರ್ ಮತ್ತು ರಿಯರ್‌ವ್ಯೂ ಕನ್ನಡಿಗಳ ಮೇಲೆ ಕ್ರೋಮ್ ಫಿನಿಶ್, ಪ್ರೀಮಿಯಂ ಮರೂನ್ ಕಲರ್ ಕ್ರಾಸ್-ಸ್ಟಿಚ್ಡ್ ಸೀಟ್, ಭೈಜ್ ಇಂಟೀರಿಯರ್ ಪ್ಯಾನೆಲ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು.

Also Read  ದಂಪತಿಗಳಲ್ಲಿ ಮನಸ್ತಾಪವವೇ? ಹೀಗೆ ಮಾಡಿ

109.7cc ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ 7.99 ಪಿಎಸ್ ಮತ್ತು 8.4 ಎನ್ಎಂ ಅನ್ನು ಹೊಂದಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅಡ್ಜಸ್ಟ್ಏಬಲ್ ಶಾಕ್ ಅಬ್ಸಾರ್ಬರ್ ಹೊಂದಿದೆ. ಎರಡೂ ತುದಿಗಳಲ್ಲಿ 12 ಇಂಚಿನ ಟ್ಯೂಬ್‌ಲೆಸ್ ಟೈರ್ ಹಾಗು ಅಲಾಯ್ ವೀಲ್ ಮತ್ತು ಸಿಬಿಎಸ್‌ ಬ್ರೇಕ್ ನೊಂದಿಗೆ ಫ್ರಂಟ್ ಡಿಸ್ಕ್ ಈ ಸ್ಕೂಟರ್ ಹೊಂದಿರುತ್ತದೆ. ಪ್ರತೀ ಲೀಟರಿಗೆ 62km ಮೈಲೇಜ್ ಹೊಂದಿದ್ದು Ex-ಷೋರೂಮ್ ಬೆಲೆ ರೂ.56791ರಿಂದ ಪ್ರಾರಂಭವಾಗಿರುತ್ತದೆ.

ಟಿವಿಎಸ್ XL100 ಹೆವಿ ಡ್ಯೂಟಿ- ಸ್ಪೆಷಲ್ ಎಡಿಷನ್: ಟಿವಿಎಸ್ ಕಂಪನಿಯು ಪ್ರಸ್ತುತ ದೇಶದ ಏಕೈಕ ಮೊಪೆಡ್ ತಯಾರಕರಾಗಿದ್ದು, ಇನ್ನೂ ಮೊಪೆಡ್‌ಗಳನ್ನು ಉತ್ಪಾದಿಸುತ್ತದೆ. ತನ್ನ ನಾಲ್ಕು ದಶಕದ ಪ್ರಯಾಣದಲ್ಲಿ ದೇಶದಾದ್ಯಂತ 1.25ಕೋಟಿಗು ಅಧಿಕ ಸಂತೃಪ್ತ ಗ್ರಾಹಕರನ್ನು ಹೊಂದಿದ್ದು ಪ್ರತಿ 40ಸೆಕೆಂಡಿಗೆ ಒಂದರಂತೆ ಟಿವಿಎಸ್ ಎಕ್ಸ್‌ಎಲ್ ಮಾರಾಟವಾಗುತ್ತಿದೆ. ಟಿವಿಎಸ್ ಈಗ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ XL100 ನ ಇನ್ನೊಂದು ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿದೆ. ಇದು ವಿಶೇಷವಾದ ಫ್ರಂಟ್ ಟೆಲಿಸ್ಕೋಪಿಕ್ ಹೊಂದಿದ್ದು, ದೊಡ್ಡದಾದ ಸಿಂಗಲ್ ಸೀಟ್ ಮತ್ತು ಬ್ಯಾಕ್ ರೆಸ್ಟ್ ಹೊಂದಿದೆ. ಮುಂಭಾಗದಲ್ಲಿ LED DRL ಜೊತೆಗೆ ವಿಶೇಷವಾಗಿ ಹೆಡ್ ಲೈಟ್ ವೈಸರ್ ಅನ್ನು ಅಳವಡಿಸಲಾಗಿದೆ. XL100 ಗ್ರಾಮೀಣ ಮಾರುಕಟ್ಟೆಗಳಲ್ಲಿ ಸಂಪೂರ್ಣ ಜನಪ್ರಿಯತೆಯನ್ನು ಹೊಂದಿದ್ದು, ಜನರಿಗೆ ಕಡಿಮೆ ನಿರ್ವಹಣಾ ವೆಚ್ಚ, ವಿಶ್ವಾಸಾರ್ಹ ಮತ್ತು ಜಂಜಾಟ ಮುಕ್ತ ವಾಹನವಾಗಿದೆ. ಇದು i-ಟಚ್ ಸೆಲ್ಫ್-ಸ್ಟಾರ್ಟ್ ನ್ನು ಹೊಂದಿದ್ದು, ಸಿಂಗಲ್-ಸಿಲಿಂಡರ್ 4-ಸ್ಟ್ರೋಕ್ 99.7 ಸಿಸಿ ಎಂಜಿನ್ ಹೊಂದಿದೆ ಹಾಗು ಪ್ರತೀ ಲೀಟರಿಗೆ 69km ಮೈಲೇಜ್ ಹೊಂದಿದ್ದು Ex-ಷೋರೂಮ್ ಬೆಲೆ ರೂ.30229ರಿಂದ ಪ್ರಾರಂಭವಾಗಿರುತ್ತದೆ.

Also Read  ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತರು ಇಂದೇ ಸಂಪರ್ಕಿಸಿ

error: Content is protected !!
Scroll to Top