(ನ್ಯೂಸ್ ಕಡಬ) newskadaba.com ಮಂಗಳೂರು ಅ. 22 : ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮ್ಯಾನೇಜ್‍ಮೆಂ ಟ್ ಆ್ಯಂಡ್ ಕಾಮರ್ಸ್‍ನ ಎಂ.ಬಿ.ಎ. ಮತ್ತು ಎಂ.ಕಾಂ. ಸ್ನಾತಕೋತ್ತರ ವಿಭಾಗದ ವತಿಯಿಂದ 2 ದಿನಗಳ ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ ವಿಭಾಗಗಳ ಅಂತರಕಾಲೇಜು ಸ್ನಾತಕೋತ್ತರ ಸ್ಪರ್ಧೋತ್ಸವ “ಮ್ಯಾಗ್ಮಾ – 2019 ಮ್ಯಾಗ್ಮೇಶಿಯನ್ ಮ್ಯಾನೇಜ್‍ಮೆಂಟ್ ವಿತ್ ಮ್ಯಾಜಿಕಲ್ ಮೈಂಡ್ಸ್“ ವು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ 2019ನೇ ಅಕ್ಟೋಬರ್ 21 ಹಾಗೂ 22 ರಂದು ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಟಲಿಸ್ಟ್ ಪೋರ್ಟ್ ಫೆಲಿಯೋದ ಮ್ಯಾನೇಜ್‍ಮೆಂಟ್ ಸರ್ವೀಸ್‍ನ ಸಿಇಓ ಮತ್ತು ನ್ಯಾಶನಲ್ ಜಿಯೋಗ್ರಫಿಯ ವೈಲ್ಡ್ ಲೈಫ್‍ಛಾಯಾಗ್ರಾಹಕ ಶ್ರೀ ಸಂತೋಷ್ ಗಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೇವಲ ಸ್ಪರ್ಧೆಗಳಲ್ಲಿ ಮಾತ್ರವಲ್ಲದೆ, ತಮ್ಮಜೀವನದಲ್ಲಿಯೂ ಮ್ಯಾಜಿಕ್ ಮಾಡಲು ತಯಾರಿರಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು. ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಡಾ.ಎ. ಶ್ರೀನಿವಾಸ್‍ರಾವ್, ಪ್ರತಿಯೊಂದು ಕ್ಷೇತ್ರದಲ್ಲೂ ಸಣ್ಣ, ಮಧ್ಯಮ ಹಾಗೂ ಬೃಹತ್ ಪ್ರಮಾಣಗಳಲ್ಲೂ ಯಾವುದೇ ರೀತಿಯ ಮ್ಯಾಜಿಕ್‍ಗಳಾಗಬಹುದು. ಅಂತೆಯೇ ಪ್ರತಿಯೊಬ್ಬನೂ ಸವಾಲುಗಳನ್ನು ನಿರ್ವಹಿಸಿದಾಗ ತಾನು ಮಾಡುವ ಕೆಲಸದಲ್ಲಿ ಉತ್ತಮ ಜಾದೂಗಾರನಾಗಲು ಸಾಧ್ಯಎಂದು ಹೇಳಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿಡಾ. ಪಿ. ಎಸ್. ಐತಾಳ್ ಮಾತನಾಡಿ, ಎಂ.ಬಿ.ಎ. ಮತ್ತು ಎಂ.ಕಾಂ. ವಿಭಾಗದ ವಿದ್ಯಾರ್ಥಿಗಳು ಇತರೆ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಿಂತ ಭಿನ್ನ.ಈ ವಿದ್ಯಾರ್ಥಿಗಳಿಗೆ ಸ್ವಂತ ಹಾಗೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ತಿಳುವಳಿಕೆಯಿರುತ್ತದೆ ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಲಿಭೆ ಕಸ್ಟಂ ಟೀಸ್‍ನ ಮಾಲಕಡಾ.ರಾಜ ಕೆ. ಜಿ., ಹೊಟೇಲ್ ರೂಪದ ವ್ಯವಸ್ಥಾಪಕ ಪಾಲುದಾರ ಶ್ರೀ ನಿಶಾಂಕ್ ಸುವರ್ಣ, ಎಂ.ಬಿ.ಎ. ಹಳೆ ವಿದ್ಯಾರ್ಥಿ ಹಾಗೂ ಆಕ್ಸಿಸ್ ಬ್ಯಾಂಕ್ ಮಂಗಳೂರಿನ ಉಪ ವ್ಯವಸ್ಥಾಪಕ ಶ್ರೀ ಡ್ಯಾರೆನ್ ಮೊಂತೆರೋ, ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಸಚಿವ (ಅಭಿವೃದ್ಧಿ) ಡಾ. ಅಜಯ್‍ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಕಾಮರ್ಸ್‍ನ ಡೀನರಾದ ಡಾ.ಶೈಲಶ್ರೀ ವಿ.ಟಿ. ನೆರೆದ ಸಭಿಕರನ್ನು ಸ್ವಾಗತಿಸಿ ಮ್ಯಾಗ್ಮಾದ ವಿದ್ಯಾರ್ಥಿ ಸಂಚಾಲಕ ಶ್ರೀ ಕಾರ್ತಿಕ್ ನಾಯಕ್ ವಂದಿಸಿದರು.ಈ ಸ್ಪರ್ಧೋತ್ಸವದ ಸಂಚಾಲಕರಾದ ಅನುಮೇಶ್‍ಕಾರಿಯಪ್ಪ ಸ್ಪರ್ಧೋತ್ಸವದ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು. ಸುಮಾರು 30 ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸ್ಪರ್ಧೋತ್ಸವದಲ್ಲಿ ಪಾಲ್ಗೊಂಡು ಸ್ಪರ್ಧೋತ್ಸವದ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಪ್ರೌಢಿಮೆ ಪ್ರದರ್ಶಿಸಿದರು.ಮ್ಯಾಗ್ಮಾದ ಪ್ರಮುಖ ಆಕರ್ಷಣೆಯಾಗಿ ಜಾದೂಗಾರ, ಇಲ್ಯೂಷನಿಸ್ಟ್, ಬೆಂಗಳೂರಿನ ಶ್ರೀಕಾಂತ್ ಇವರಿಂದ ಮ್ಯಾಜಿಕ್ ಶೋವನ್ನು ಪ್ರದರ್ಶಿಸಿದರು.