ಕೆಮಿಕಲ್ ಫ್ಯಾಕ್ಟರಿಯೊಳಗೆ ಸರಣಿ ಸಿಲಿಂಡರ್ ಸ್ಫೋಟ ➤ 10ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಮುಂಬೈ, ಆಗಸ್ಟ್.31.ಮಹಾರಾಷ್ಟ್ರ ಧುಲೇ ಸಮೀಪದ ಶಿರ್ಪುರ್ ಎಂಬಲ್ಲಿ ರಾಸಾಯನಿಕ ಉತ್ಪನ್ನ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಸುಮಾರು 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ 9.45ರ ಸುಮಾರಿಗೆ ಕೆಮಿಕಲ್ ಫ್ಯಾಕ್ಟರಿಯೊಳಗೆ ಸರಣಿ ಸಿಲಿಂಡರ್ ಸ್ಫೋಟ ಸಂಭವಿಸಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.ಸ್ಫೋಟದ ರಭಸಕ್ಕೆ 70ಕ್ಕೂ ಅಧಿಕ ಮಂದಿ ಕಾರ್ಖಾನೆ ಒಳಗಡೆ ಸಿಲುಕಿದ್ದು, 20 ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ.ಸ್ಥಳಕ್ಕೆ ಎನ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.ಸ್ಫೋಟದಿಂದಾಗಿ ಇಡೀ ಪ್ರದೇಶ ಕಪ್ಪು ಹೊಗೆಯಿಂದ ಆವರಿಸಿಕೊಂಡಿದೆ. ಈವರೆಗೆ ಎಂಟು ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಕಚೇರಿ ಆಡಳಿತ ಮತ್ತು ರಿಟೈಲ್ ಸೇಲ್ಸ್ ಕೋರ್ಸ್ ಇದರ ವತಿಯಿಂದ ಉಚಿತ ತರಬೇತಿ

error: Content is protected !!
Scroll to Top