ಪುನಃ ಕದನ ವಿರಾಮ ಉಲ್ಲಂಘನೆ ಗೈದ ಪಾಕಿಸ್ತಾನ➤ದಾಳಿಯಲ್ಲಿ ಹುತಾತ್ಮರಾದ ಡೆಹ್ರಾಡೂನ್ ಮೂಲದ ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ

(ನ್ಯೂಸ್ ಕಡಬ) newskadaba.com (ಜಮ್ಮು-ಕಾಶ್ಮೀರ) ರಜೌರಿ, ಆಗಸ್ಟ್.17. ಇಂದು ಬೆಳಗ್ಗೆ ಜಮ್ಮುವಿನ ರಜೌರಿ ಜಿಲ್ಲೆಯ ನೌಶೆರಾ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಬಂದು ಪಾಕಿಸ್ತಾನ ಸೇನಾ ಯೋಧರು ಅಪ್ರಚೋದಿತ ಗುಂಡಿದ ದಾಳಿ ನಡೆಸಲಾರಂಭಿಸಿದರು. ಇದಕ್ಕೆ ಗಡಿಯನ್ನು ಕಾಯುತ್ತಿದ್ದ ಭಾರತೀಯ ಸೇನಾ ಯೋಧರು ತಕ್ಕ ಪ್ರತ್ಯುತ್ತರ ನೀಡಲು ಆರಂಭಿಸಿದರು.

ದಾಳಿಯಲ್ಲಿ ಡೆಹ್ರಾಡೂನ್ ಮೂಲದ 35 ವರ್ಷದ ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ ಹುತಾತ್ಮರಾಗಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವರದಿ ಬರುವವರೆಗೂ ಎರಡೂ ಕಡೆಯ ಸೇನೆಯಿಂದ ದಾಳಿ ಮುಂದುವರಿದಿದೆ.  ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರ ಮತ್ತು ಲಡಾಕ್ ನಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಸಾರ್ವಜನಿಕ ಜೀವನ ಸ್ಥಗಿತವಾಗಿತ್ತು.

Also Read  ದ.ಕ :ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ➤ ಇಂದಿನಿಂದ ನಾಮ ಪತ್ರ ಸಲ್ಲಿಕೆ, ಇವಿಎಂ ಬಳಕೆಯಿಲ್ಲ

ನಿನ್ನೆ ಭಾಗಶಃ ಸರ್ಕಾರ ಸಡಿಲಗೊಳಿಸಿ ಇನ್ನೇನು ಸಾಮಾನ್ಯ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಷ್ಟರಲ್ಲಿ ಪಾಕಿಸ್ತಾನ ಸೇನೆ ದಾಳಿ ಆರಂಭಿಸಿದೆ. ಭಾರತ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು ಈ ಹಿನ್ನಲೆಯಲ್ಲಿ ಈ ದಾಳಿ ನಡೆಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ತಿಂಗಳು ಸಹ ಪಾಕಿಸ್ತಾನ ಸೇನೆ ಪೂಂಚ್ ಮತ್ತು ರಜೌರಿ ಜಿಲ್ಲೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸಿದ್ದ ದಾಳಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿ 10 ದಿನಗಳ ಮಗು ಮೃತಪಟ್ಟಿತ್ತು ಮತ್ತು ಹಲವು ನಾಗರಿಕರು ಗಾಯಗೊಂಡಿದ್ದರು.

Also Read  ಮನೆಯಲ್ಲಿ ಸಣ್ಣ ಸಣ್ಣ ಕಿರಿಕಿರಿ ಗಂಡ ಹೆಂಡತಿ ಜಗಳ ಮನಸ್ತಾಪ ಉಂಟಾಗಲು ಕಾರಣಗಳು | ಸೂಕ್ತ ನಿವಾರಣೆ ಇಲ್ಲಿದೆ

error: Content is protected !!
Scroll to Top