ಹೈದರಾಬಾದ್➤ಸ್ವಾತಂತ್ರ್ಯೋತ್ಸವದಂದು “ಬೆಸ್ಟ್ ಕಾನ್ಸ್ಟೇಬಲ್ ಪ್ರಶಸ್ತಿ” ಮರುದಿನ ಲಂಚಕ್ಕಾಗಿ ಕೈಚಾಚಿದ

(ನ್ಯೂಸ್ ಕಡಬ) newskadaba.com ಹೈದರಾಬಾದ್, ಆಗಸ್ಟ್.17. ತೆಲಂಗಾಣದ ಮಹಬೂಬನಗರದ ಜಿಲ್ಲೆಯ ಐಟಿ ಟೌನ್​ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇದೆ ಪಲ್ಲೆ ತಿರುಪತಿ ರೆಡ್ಡಿ ತಮ್ಮ ಕಾರ್ಯದಲ್ಲಿ ತೋರಿದ ಶ್ರದ್ಧೆ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸಿ ತೆಲಂಗಾಣದ ಪೇದೆಯೊಬ್ಬನಿಗೆ 15 ಆಗಸ್ಟ್​ , 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಂದು  “ಉತ್ತಮ ಪೇದೆ (ಬೆಸ್ಟ್​ ಕಾನ್ಸ್​ಟೇಬಲ್​) ಪ್ರಶಸ್ತಿ” ನೀಡಲಾಗಿತ್ತು.

ಮರುದಿನ 17 ಸಾವಿರ ರೂ. ಲಂಚ ಪಡೆದು ಪ್ರತ್ಯಕ್ಷ ಸಾಕ್ಷಿಯಾಗಿ​  ಸಿಕ್ಕಿಬಿದ್ದಿದ್ದಾನೆ.  ಲಂಚ ನೀಡುವಂತೆ ರಮೇಶ್​ ಎಂಬುವರಿಗೆ ತಿರುಪತಿ ರೆಡ್ಡಿ ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದ. ಪೇದೆಯ ಕಿರುಕುಳದಿಂದ ಬೇಸತ್ತ ರಮೇಶ್​ ತೆಲಂಗಾಣ ಎಸಿಬಿಗೆ ದೂರು ನೀಡಿದ್ದರು.

Also Read   30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ ತಿರುಪತಿ ರೆಡ್ಡಿಯನ್ನು ಶುಕ್ರವಾರ ಸಂಜೆ 5 ಗಂಟೆಗೆ ಪತ್ತೆಹಚ್ಚಿದ್ದಾರೆ. ಪೇದೆಯನ್ನು ಬಂಧಿಸಲಾಗಿದ್ದು, ವಿಶೇಷ ಕೋರ್ಟ್​ ಸಮ್ಮುಖದಲ್ಲಿ ಹಾಜರುಪಡಿಸಲಾಗಿದೆ.

error: Content is protected !!
Scroll to Top