ಮೊಬೈಲ್ ಇಂಟರ್ನೆಟ್ ಸೇವೆ ➤ ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಇಂದಿನಿಂದ ಚಾಲ್ತಿ

(ನ್ಯೂಸ್ ಕಡಬ) newskadaba.com ಜಮ್ಮು ಕಾಶ್ಮೀರ, ಆಗಸ್ಟ್.17. ಇಂದಿನ ಬೆಳಗ್ಗೆಯಿಂದಲೇ ಜಮ್ಮು, ರಜೌರಿ ಜಿಲ್ಲೆಯಲ್ಲಿ ಕೂಡ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಷೇಧಾಜ್ಞೆಯ ಬಳಿಕ ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶನಿವಾರ 2ಜಿ ವೇಗದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಆರಂಭವಾಗಿದೆ. ಮಧ್ಯರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಜಮ್ಮು, ರಿಯಾಸಿ, ಸಾಂಬಾ, ಕಥುವಾ ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ಮರು ಆರಂಭಿಸಲಾಗಿದ್ದು 2ಜಿ ಸ್ಪೀಡ್ ಹೊಂದಿರುತ್ತದೆ.

ಅನಗತ್ಯ ವದಂತಿಗಳು ಹರಡದಂತೆ, ಗೊಂದಲ, ಆತಂಕಕಾರಿ ವಾತಾವರಣ ಸೃಷ್ಟಿಯಾಗಬಾರದೆಂದು ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಭಾಗಶಃ ಇಂದು ಮೊಬೈಲ್ ಮತ್ತು ಇಂಟರ್ನೆಟ್ ಸೇವೆ ಆರಂಭವಾಗಿದ್ದು ಹೈಸ್ಪೀಡ್ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಹೇಳಿದರು. ಜಮ್ಮು-ಕಾಶ್ಮೀರ ಮತ್ತು ಲಡಾಕ್ ನಲ್ಲಿ ಜಿಲ್ಲಾಡಳಿತ ಅಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ ನಿಗಾವಹಿಸುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಇರಿಸಿದೆ.

ಈ ಮಧ್ಯೆ ರಜೌರಿ ಜಿಲ್ಲೆಯಲ್ಲಿ ಹಗಲು ಹೊತ್ತಿನಲ್ಲಿ ನಿಷೇಧ ಸಡಿಲಿಸಲಾಗಿದ್ದು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಜಮ್ಮು-ಕಾಶ್ಮೀರ ಮತ್ತು ಲಡಾಕ್ ಗೆ ನೀಡಲಾಗಿದ್ದ ಸಂವಿಧಾನ ವಿಧಿ 370ನ್ನು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ನಂತರ ಕಳೆದ ಆಗಸ್ಟ್ 4ರಂದು ಮಧ್ಯರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಕೂಡ ಸ್ಥಿರ ದೂರವಾಣಿ ಸೇವೆ 17 ವಿನಿಮಯ ಕೇಂದ್ರಗಳಲ್ಲಿ ಮರುಸ್ಥಾಪನೆಯಾಗಿದೆ.

ಸುಮಾರು 100 ಟೆಲಿಫೋನ್ ಎಕ್ಸ್ ಚೇಂಜ್ ಗಳಲ್ಲಿ 17 ವಿನಿಮಯ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ಆರಂಭವಾಗಿದೆ. ಸಿವಿಲ್ ಲೈನ್ ಏರಿಯಾಗಳು, ಕಂಟೋನ್ಮೆಂಟ್ ಏರಿಯಾಗಳು, ಶ್ರೀನಗರ ಜಿಲ್ಲೆಯ ವಿಮಾನ ನಿಲ್ದಾಣಗಳಲ್ಲಿ ಈ ಸ್ಥಿರ ದೂರವಾಣಿ ವಿನಿಮಯ ಕೇಂದ್ರಗಳಿವೆ. ಬುದ್ಗಾಮ್, ಸೋನಮಾರ್ಗ್ ಮತ್ತು ಮನಿಗಮ್ ಪ್ರದೇಶಗಳಲ್ಲಿ, ಉತ್ತರ ಕಾಶ್ಮೀರದ ಗುರೆಝ್, ತಂಗ್ ಮಾರ್ಗ್, ಉರಿ ಕೆರನ್ ಕರ್ನಾ ಮತ್ತು ಟಂಗ್ ದಾರ್ ಪ್ರದೇಶಗಳಲ್ಲಿ ಕೂಡ ಸ್ಥಿರ ದೂರವಾಣಿ ಸೇವೆ ಮರು ಆರಂಭವಾಗಿದೆ.

ದಕ್ಷಿಣ ಕಾಶ್ಮೀರದ ಖ್ವಾಜಿಗುಂಡ್ ಮತ್ತು ಪಹಲ್ಗಾಮ್ ಪ್ರದೇಶಗಳಲ್ಲಿ ಕೂಡ ಸ್ಥಿರ ದೂರವಾಣಿ ಸೇವೆಗಳನ್ನು ಪುನರಾರಂಭಿಸಲಾಗಿದೆ. ನಿನ್ನೆ ಬೆಳಿಗ್ಗೆಯಿಂದಲೇ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ಹೇರಿದ್ದ ನಿಷೇಧಾಜ್ಞೆಗಳಲ್ಲಿ ಹಂತಹಂತವಾಗಿ ಹಿಂತೆಗೆದುಕೊಳ್ಳುತ್ತಾ ಒಂದೊಂದೇ ಸೇವೆಗಳನ್ನು ಮರು ಆರಂಭಗೊಳಿಸುತ್ತಾ ಬಂದಿದೆ. ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಎಂದಿನಂತೆ ಕಾರ್ಯನಿರ್ವಹಣೆ ಆರಂಭಿಸುವಂತೆ ಆದೇಶ ಹೊರಡಿಸಿದ್ದರು.

error: Content is protected !!

Join the Group

Join WhatsApp Group