ಉಪ್ಪಿನಂಗಡಿ: ಮುಳುಗಡೆಗೊಂಡ ನದಿ ತೀರದ ಪ್ರದೇಶಗಳು ➤ ನೀರಿನ ರಭಸಕ್ಕೆ ಕೊಚ್ಚಿ ಹೋದ ವಳಾಲು ತೂಗು ಸೇತುವೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.10. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವಂತೆಯೇ, ನದಿ ತೀರದ ಪ್ರದೇಶಗಳು ಮುಳುಗಡೆಗೊಳ್ಳುತ್ತಿದ್ದು, ನೀರಿನ ರಭಸಕ್ಕೆ ವಳಾಲು ತೂಗುಸೇತುವೆ ನೀರುಪಾಲಾಗಿದೆ.

ಶುಕ್ರವಾರ ಸಂಜೆಯ ವೇಳೆಗಾಗಲೇ ತೂಗುಸೇತುವೆಯ ಮೇಲಕ್ಕೆ ನೀರು ಬಂದಿದ್ದು, ಮರಗಳು ಬಡಿದು ಹಾನಿ ಸಂಭವಿಸಿತ್ತು. ರಾತ್ರಿಯಾಗುತ್ತಿದ್ದಂತೆ ಸೇತುವೆಯ ಮಧ್ಯ ಭಾಗ ಮುರಿದು ಬಿದ್ದಿದ್ದು, ನೀರುಪಾಲಾಗಿದೆ.

Scroll to Top