(ನ್ಯೂಸ್ ಕಡಬ) newskadaba.com ಜಮ್ಮು, ಜುಲೈ.6 ಅಮರನಾಥ ಒಂದು ಪವಿತ್ರ ಕ್ಷೇತ್ರವೂ ಹೌದು ಹಾಗೇ ಪ್ರವಾಸಿ ತಾಣವು ಹೌದು.ಅಮರನಾಥ ಯಾತ್ರೆ ಕೈಗೊಂಡಿರುವ ಯಾತ್ರಿಕರು ಸಾಗುತ್ತಿರುವ ಮಾರ್ಗದಲ್ಲಿ ಹಿಮಪರ್ವತಗಳ ಸಾಲಿನಿಂದ ಕಲ್ಲುಗಳ ಸುರಿಮಳೆಯೇ ಆಯಿತು.
ಅಲ್ಲಿ ರಕ್ಷಾ ಫಲಕಗಳನ್ನು ಹಿಡಿದು ಸಾಲಾಗಿ ನಿಂತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ನ (ಐಟಿಬಿಪಿ) ಯೋಧರು ಕಲ್ಲುಗಳು ಯಾತ್ರಿಕರಿಗೆ ಬಡಿಯದಂತೆ ತಡೆದರು.ಅಮರನಾಥ ಗುಹೆಯತ್ತ ತೆರಳುವ ಬಾಲ್ಟಾಲ್ ಮಾರ್ಗದಲ್ಲಿ ಹಿಮಪರ್ವತಗಳಿಂದ ಕಲ್ಲುಗಳು ಉರುಳಲಾರಂಭಿಸಿಸಿದ್ದವು. ಕೆಲವೊಮ್ಮೆ ಒಂದರ ಹಿಂದೆ ಒಂದರಂತೆ ನಿರಂತರವಾಗಿ ಉರುಳುವುದರಿಂದ, ಅವುಗಳಿಂದ ರಕ್ಷಣೆ ಪಡೆಯಲು ಕಷ್ಟವಾಗುತ್ತದೆ.
ಈ ಗುಹೆಯಲ್ಲಿ ಹಿಮವು ಶಿವಲಿಂಗದ ಆಕಾರ ಪಡೆದುಕೊಂಡಿರುತ್ತದೆ. ಹಿಮಪರ್ವತಗಳಿಂದ ಕೂಡಿರುವ ದುರ್ಗಮ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಈ ಶಿವಲಿಂಗದ ದರ್ಶನ ಪಡೆಯಬೇಕಾಗುತ್ತದೆ. ಇಷ್ಟು ಎತ್ತರಕ್ಕೆ ಸಾಗುವಾಗ ಆಮ್ಲಜನಕದ ಕೊರತೆಯಿಂದಾಗಿ ಹಲವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ.ಇಂಥ ಸಮಸ್ಯೆಯಿಂದ ಬಳಲುವ ಅಂದಾಜು 25ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಆಮ್ಲಜನಕವನ್ನು ಪೂರೈಕೆ ಮಾಡುವ ಮೂಲಕ ಐಟಿಬಿಪಿ ಯೋಧರು ರಕ್ಷಣೆ ಒದಗಿಸಿದರು.