ಕೆಎಸ್ಆರ್ಟಿಸಿ ಬಸ್ ಮತ್ತು ಆಟೋ ಢಿಕ್ಕಿ ➤ ನಾಲ್ಕುಮಂದಿ ದಾರುಣ ಸಾವು

(ನ್ಯೂಸ್ ಕಡಬ) newskadaba.com ತುಮಕೂರು, ಜುಲೈ.4ಇಂದು ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಆಟೋಗೆ  ಢಿಕ್ಕಿಹೊಡೆದಿದೆ. ಪರಿಣಾಮವಾಗಿ  ಆಟೋದಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರ ಬಳಿ ನಡೆದಿದೆ.

ಮೃತ ದುರ್ದೈವಿಗಳು ತುಮಕೂರಿಗೆ ಖಾಸಗಿ ಆಸ್ಪತ್ರೆ ಗೆ ಚಿಕಿತ್ಸೆಗೆಂದು ಬರುತ್ತಿದ್ದರು ಎಂದು ತಿಳಿದು ಬಂದಿದೆ. ಆಟೋ ಚಾಲಕ ಹರೀಶ್ (37), ಪ್ರಯಾಣಿಕರಾದ ವೃದ್ಧ ದಂಪತಿ ಬಸವರಾಜು(67), ಗಂಗಾಂಬಿಕಾ (61) ಮತ್ತು ಇನ್ನೋರ್ವ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ.ಇವರೆಲ್ಲರೂ ಮೂಲತಃ ಗುಬ್ಬಿ ತಾಲೂಕಿನ ಮತ್ತಿಗಟ್ಟ ನಿವಾಸಿಗಳು ಎಂದು ತಿಳಿದು ಬಂದಿದೆ.ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿಗಿದೆ.ಇಬ್ಬರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಮಲಾಗಿದೆ.

Also Read  ಸೆ.23ರಂದು ಬಂಟ್ವಾಳ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

error: Content is protected !!
Scroll to Top