(ನ್ಯೂಸ್ ಕಡಬ) newskadaba.com ಮುಂಬೈ, ಜೂನ್.28.ರಾಜ್ಯದಲ್ಲಿ ಪ್ಲ್ಯಾಸ್ಟಿಕ್ ನಿಷೇಧ ಮಾಡಿರುವ ಮಹಾರಾಷ್ಟ್ರ ಸರ್ಕಾರ ಹಾಲಿನ ಪ್ಯಾಕೆಟ್‌ಗಳನ್ನು ಮರುಬಳಕೆ ಮಾಡುವುದಕ್ಕಾಗಿ ಹೊಸ ಯೋಚನೆಯನ್ನು ಹಾಕಿಕೊಂಡಿದೆ.
ಹಾಲಿನ ಪ್ಲ್ಯಾಸ್ಟಿಕ್ ಕವರ್ಗಳನ್ನು ಮರುಬಳಕೆ ಮಾಡುವುದನ್ನು ಪ್ರೋತ್ಸಾಹಿಸಲು ಪ್ರತಿ ಹಾಲಿನ ಪ್ಯಾಕೆಟ್ಗೆ 50 ಪೈಸೆ ಮರುಪಾವತಿಯ ಬೆಲೆಯನ್ನು ವಿಧಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದ ಖಾಲಿಯಾದ ಹಾಲಿನ ಪ್ಯಾಕೆಟ್‌ಗಳನ್ನು ಚಿಲ್ಲರೆ ವ್ಯಾಪಾರಿಗಳ ಬಳಿ ನೀಡಿದರೆ, 50 ಪೈಸೆಯನ್ನು ಅವರು ಗ್ರಾಹಕರಿಗೆ ಮರುಪಾವತಿಸಲಿದ್ದಾರೆ.ಗ್ರಾಹಕರು ಖಾಲಿ ಕವರ್ಗಳನ್ನು ವಾಪಸ್ ನೀಡಿ 50 ಪೈಸೆ ಪಡೆಯಬಹುದಾಗಿದೆ.