ಐದನೇ ಅಂತಾರಾಷ್ಟ್ರೀಯ ಯೋಗಹಬ್ಬದ ಸಂಭ್ರಮ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜೂನ್.22. ಐದನೇ ಅಂತಾರಾಷ್ಟ್ರೀಯ ಯೋಗದಿನವನ್ನು ದೇಶಾದಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದಾದ್ಯಂತ ಯೋಗ ಪ್ರದರ್ಶನ ಮಾಡುವ ಮೂಲಕ ಯೋಗದಿನ ಆಚರಿಸಿದರು.

2014 ರ ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಿಸುವ ಪ್ರಸ್ತಾಪವನ್ನಿಟ್ಟಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ವಿಶ್ವಸಂಸ್ಥೆ, ಜೂನ್ 21 ರಂದು ಯೋಗ ದಿನ ಆಚರಿಸಲು ಒಪ್ಪಿಗೆಸೂಚಿಸಿತ್ತು. 2015ರ ಜೂನ್21ರಂದು ಮೊದಲ ಯೋಗದಿನವನ್ನು ಆಚರಿಸಲಾಗಿತ್ತು.ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಗೃಹಸಚಿವ ಅಮಿತ್ ಶಾ, ಹರ್ಯಾಣದ ರೋಹ್ಟಕ್ ನಲ್ಲಿ ಯೋಗದಿನದಕಾರ್ಯಕ್ರಮದಲ್ಲಿಭಾಗಿಯಾದರು.

Also Read  ಪುರುಷರ 'IPL 2023 ಪಂದ್ಯಾವಳಿ'ಯ ವೇಳಾಪಟ್ಟಿ ಪ್ರಕಟ

error: Content is protected !!
Scroll to Top