ಶಿವಸೇನೆ ಯುವ ನಾಯಕನಿಗೆ ಮಹಾರಾಷ್ಟ್ರ ಡಿಸಿಎಂ ಪಟ್ಟ

(ನ್ಯೂಸ್ ಕಡಬ) newskadaba.com ಮುಂಬಯಿ, ಜೂನ್.13.29 ಹರೆಯದ ಆದಿತ್ಯ ಠಾಕ್ರೆ ಅವರನ್ನು ಫ‌ಡ್ನವೀಸ್‌ ಬಳಿಕ ಆದರ್ಶ ಅಭ್ಯರ್ಥಿಯನ್ನಾಗಿಸುವ ಸಿದ್ದತೆಯಲ್ಲಿ ಶಿವಸೇನೆ ತೊಡಗಿದೆ. ಆದಿತ್ಯ ಠಾಕ್ರೆ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆಗಳಿವೆ ಎಂದು ವರದಿಯೊಂದು ಹೇಳಿದೆ.

ವಿಧಾನಸಭಾ ಚುನಾವಣೆ ಸನಿಹವಾಗಿರುವ ವೇಳೆಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರೊಂದಿಗೆ ಈಗಾಗಲೇ ಈ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಆದಿತ್ಯ ಠಾಕ್ರೆ ಅವರನ್ನು ಚುನಾವಣಾ ಸ್ಪರ್ಧೆಗೆ ಇಳಿಸಲು ಶಿವಸೇನೆ ಸಿದ್ಧತೆ ಮಾಡಿಕೊಂಡಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಡಿಎನ್‌ಎ ವರದಿಯಂತೆ ಶುಕ್ರವಾರ ಇಲ್ಲ ಶನಿವಾರ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ವೇಳೆ ಆದಿತ್ಯ ಅವರಿಗೆ ಹುದ್ದೆ ನೀಡುವ ಸಾಧ್ಯತೆಗಳಿವೆಎನ್ನಲಾಗಿದೆ.

ಈಗ ಡಿಸಿಎಂ ಮಾಡಿ ಪ್ರಭಾವ ಬಳಸಿ ಗೆಲ್ಲಿಸಿಕೊಳ್ಳುವ ರಣತಂತ್ರ ಶಿವಸೇನೆ ಪಾಳಯದ್ದುಎಂದು ಹೇಳಲಾಗಿದೆ.ಬಿಜೆಪಿ ಶಿವಸೇನೆಯ ಪ್ರಸ್ತಾವನೆಯನ್ನು ಒಪ್ಪಿ ಆದಿತ್ಯ ಠಾಕ್ರೆಗೆ ಡಿಸಿಎಂ ಹುದ್ದೆ ನೀಡಿದ್ದೇ ಆದಲ್ಲಿ ಈ ಹಿಂದಿನ ಪ್ರೀತಿ ಮತ್ತು ದ್ವೇಷದ ಶಿವಸೇನೆ -ಬಿಜೆಪಿ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎನ್ನಲಾಗಿದೆ. ಶಿವಸೇನೆ ಪರಮೋಚ್ಛ ನಾಯಕ ದಿವಂಗತ ಬಾಳ್‌ ಠಾಕ್ರೆ ಅವರಾಗಲಿ, ಪುತ್ರ ಉದ್ಭವ್‌ ಠಾಕ್ರೆ ಅವರಾಗಲಿ ಇದುವರೆಗೆ ಚುನಾವಣಾ ಸ್ಪರ್ಧೆಗೆ ಇಳಿದಿಲ್ಲ, ಆ ಅಪವಾದವನ್ನ 3 ನೇ ತಲೆಮಾರಿನ ಕುಡಿ ಆದಿತ್ಯ ಮೂಲಕ ಸುಳ್ಳಾಗಿಸಲು ಉದ್ಭವ್‌ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.

Also Read  ಹೈನುಗಾರರಿಗೆ ತಲೆನೋವು ತಂದಿಟ್ಟ “ಒಟೈಟಿಸ್”- ಇದೇನಿದು ಹೊಸ ಕಾಯಿಲೆ…ಇಲ್ಲಿದೆ ಓದಿ

ಶಿವಸೇನೆ ಲೋಕಸಭೆಯ ಡೆಪ್ಯುಟಿ ಸ್ಪೀಕರ್‌ ತನಗೆ ಸಿಗಬೇಕು ಎಂದು ಪಟ್ಟು ಹಿಡಿದಿತ್ತು, ಇದು ನಮ್ಮ ಬೇಡಿಕೆಯಲ್ಲ 18 ಸ್ಥಾನ ಹೊಂದಿರುವ ನಮ್ಮ ಹಕ್ಕು ಎಂದೂ ಹೇಳಿತ್ತು. ಡ್ಯೆಪುಟಿ ಸ್ವೀಕರ್‌ ಹುದ್ದೆ ಸಿಗದಿದ್ದಲ್ಲಿ ಡಿಸಿಎಂ ಹುದ್ದೆಗೆ ಪಟ್ಟು ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ.ಬಿಜೆಪಿ ಈಗಾಗಲೇ ದೇವೇಂದ್ರ ಫ‌ಡ್ನವೀಸ್‌ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿದೆ.

Also Read  ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ಕಾಡುಗಳ್ಳ ವೀರಪ್ಪನ್ ಮಗಳು ನೇಮಕ..!!

error: Content is protected !!
Scroll to Top