ಕೈ ಅತೃಪ್ತನಾಯಕರಿಗೆ ಬಹಿರಂಗವಾಗಿ ಬಿಜೆಪಿಗೆ ಆಹ್ವಾನ➤ರಾಜ್ಯ ಬಿಜೆಪಿ ಉಸ್ತುವಾರಿ ಸಚಿವರ ವಿರುದ್ದ ರಾಜ್ಯ ಕಾಂಗ್ರೆಸ್ ಆಕ್ರೋಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.6.ಈಗಿನ ಬಿಜೆಪಿ ಉಸ್ತುವಾರಿ ಸಚಿವ ಮುರಳೀದರ್ ರಾವ್ ಅವರು ಬುಧವಾರ ನಡೆದ ಬಿಜೆಪಿ ಸಂಸದರ ಅಭಿನಂದನಾ ಸಭೆಯಲ್ಲಿ ಮೈತ್ರಿ ಸರ್ಕಾರದ ಶಾಸಕರನ್ನು ಬಹಿರಂಗವಾಗಿಯೇ ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿರುವುದಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವರ ವಿರುದ್ದ ರಾಜ್ಯ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್‌ ಬಹಿರಂಗವಾಗಿಯೇ ನೀವು ಮೈತ್ರಿ ಸರ್ಕಾರದ ಶಾಸಕರನ್ನು ಆಹ್ವಾನಿಸುತ್ತಿದ್ದೀರಿ. ನಿಮ್ಮ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಆಪರೇಷನ್‌ ಕಮಲದ ಕುದುರೆ ವ್ಯಾಪಾರವು ವಿಫ‌ಲ ಯತ್ನ ಎಂದು ಸಾಬೀತಾಗಿದೆ.

ಹೀಗಿದ್ದರೂ, ಆಪರೇಷನ್‌ ಕಮಲದ ದಲ್ಲಾಳಿಯಂತೆ ವರ್ತಿಸುತ್ತಿದ್ದೀರಿ ನಿಮಗೆ ನಾಚಿಕೆ ಆಗುವುದಿಲ್ಲವೇ? ಐದು ವರ್ಷಗಳ ಕಾಲ ನಿಮ್ಮ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ಬರಬೇಕಾದ ಯಾವುದೇ ಯೋಜನೆಗಳು, ಅನುದಾನಗಳು ಇನ್ನೂ ಸರಿಯಾಗಿ ಬಂದಿಲ್ಲ. ನಿಮ್ಮ 25 ಸಂಸದರು ಹೇಡಿತನವನ್ನು ಬಿಟ್ಟು ಧೈರ್ಯವಾಗಿ  ಪ್ರಧಾನಿ ಮೋದಿಯವರ ಜೊತೆ ಚರ್ಚೆನಡೆಸಿ ರಾಜ್ಯದ ಹಿತ ಕಾಪಾಡುವ ಜವಾಬ್ದಾರಿಯನ್ನು ನಿಭಾಯಿಸುವಂತೆ ಹೇಳಿ ಎಂದು ರಾಜ್ಯ ಕಾಂಗ್ರೆಸ್‌ ಪಕ್ಷ  ಟ್ವೀಟ್ ಮಾಡಿದೆ.

Also Read  ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ  ಮಹಿಳಾ ಆರೋಪಿ ಆತ್ಮಹತ್ಯೆಗೆ ಯತ್ನ.. !!!

error: Content is protected !!
Scroll to Top