ಮಳೆಗಾಗಿ ದೇಗುಲದಲ್ಲಿ ಸರ್ಕಾರದ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com  ಚಿಕ್ಕಮಗಳೂರು, ಜೂನ್.5. ಸರ್ಕಾರದ ವತಿಯಿಂದ ಋಷ್ಯಶೃಂಗ ದೇಗುಲದಲ್ಲಿ ನಾಳೆ ಗುರುವಾರ ವಿಶೇಷ ಪೂಜೆ ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಹೋಮಗಳು  ಪೂಜೆಗಳನ್ನು ನಡೆಸಲಾಗುತ್ತಿದೆ.ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಪಿ.ಟಿ.ಪರಮೇಶ್ವರ್‌ ನಾಯ್ಕ್‌ ಅವರು ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಿದ್ದಾರೆ.

ಬೆಳೆ ಆಗುವಂತೆ ಪ್ರಾರ್ಥಿಸಿ ಭಕ್ತರು ಕ್ಷೇತ್ರಕ್ಕೆ ಬಂದು ಪೂಜಾಕೈಂಕರ್ಯಗಳನ್ನು ನೆರವೇರಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಪುರಾಣದಲ್ಲಿ ಕಶ್ಯಪ ಬ್ರಹ್ಮನ ಮೊಮ್ಮಗನಾದ ಮಹರ್ಷಿ ಋಷ್ಯಶೃಂಗರು ಮೋಡಗಳನ್ನು ಆಕರ್ಷಿಸಿ ಮಳೆ ತರಿಸುವ ವಿಶಿಷ್ಟ ಶಕ್ತಿಯಿದ್ದ ಕಾರಣಕ್ಕೆ ಈ ಕ್ಷೇತ್ರ ಹೆಸರಾಗಿದೆ. ಸಕಾಲಕ್ಕೆ ಮಳೆ ಬರುವಂತೆ ಪ್ರಾರ್ಥಿಸಲಿದ್ದಾರೆ.

Also Read  'ಡ್ರಗ್ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಬದ್ಧ' - ಅಮಿತ್ ಶಾ

error: Content is protected !!
Scroll to Top