ನರೇಂದ್ರ ಮೋದಿ ಪ್ರಭಾವಿ ನಾಯಕ ➤ ಹಾಡಿ ಹೊಗಳಿದ ಸೂಪರ್ಸ್ಟಾರ್ ರಜನಿಕಾಂತ್

(ನ್ಯೂಸ್ ಕಡಬ) newskadaba.com ಚೆನ್ನೈ , ಮೇ.28.ಸುದ್ದಿಗಾರರೊಂದಿಗೆ ಮಾತನಾಡಿದ ಸೂಪರ್‌ಸ್ಟಾರ್‌ ರಜನಿಕಾಂತ್‌, ಬಿಜೆಪಿ ನೇತೃತ್ವದ ಎನ್‌ಡಿಎಯ ಭರ್ಜರಿ ಗೆಲುವು ನಿಜವಾಗಿಯೂ ನರೇಂದ್ರ ಮೋದಿ ಅವರ ಗೆಲುವು.

ಜವಹರ್ ಲಾಲ್ ನೆಹರು,ರಾಜೀವ್ ಗಾಂಧಿ ಬಳಿಕ ನರೇಂದ್ರ ಮೋದಿ ಭಾರತದ ಓರ್ವ ಪ್ರಭಾವಿ ನಾಯಕ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಪ್ರಧಾನಿಯನ್ನುಹಾಡಿ ಹೊಗಳಿದ್ದಾರೆ. 2017 ರಲ್ಲಿ ರಜನಿಕಾಂತ್‌ ಅವರು ರಾಜಕೀಯ ಪ್ರವೇಶದ ಕುರಿತಾಗಿ ಘೋಷಿಸಿದ್ದರು. ಆದರೆ ಪ್ರಸಕ್ತ ಲೋಕಸಭಾ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಲು ಉತ್ಸಾಹ ತೋರಿರಲಿಲ್ಲ. ಯಾವೊಬ್ಬ ಅಭ್ಯರ್ಥಿಯು ತನ್ನ ಭಾವಚಿತ್ರ ಬಳಸಿಕೊಳ್ಳಬಾರದಂತೆ ಮನವಿ ಮಾಡಿದ್ದರು.

Also Read  ಬಜಪೆ- ಆಟೋರಿಕ್ಷಾ ನಿಲ್ದಾಣ ಇಂದು ಉದ್ಘಾಟನೆ

ನಾನು ಮೇ 30 ರಂದು ಪ್ರಧಾನಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.ಇದೇ ವೇಳೆ ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ. ಅವರಿಗೂ ಸಾಧ್ಯ ಎನ್ನುವುದನ್ನು ತೋರಿಸಿಕೊಡಬೇಕು. ಯುವಕನಾಗಿರುವ ಹಿನ್ನಲೆಯಲ್ಲಿ ಅವರಿಗೆಪಕ್ಷ ನಿಭಾಯಿಸುವುದು ಕಷ್ಟವಾಗಿರಬಹುದು. ಪ್ರಜಾಪ್ರಭುತ್ವದಲ್ಲಿ ವಿಪಕ್ಷವೂ ಪ್ರಬಲವಾಗಿರಬೇಕು ಎಂದರು.

error: Content is protected !!
Scroll to Top