ನರೇಂದ್ರ ಮೋದಿಯವರಿಗೆ ಶುಭಹಾರೈಸಿದ ಶ್ರೀಲಂಕಾ ಪ್ರಧಾನಿ

(ನ್ಯೂಸ್ ಕಡಬ) newskadaba.com ಕೊಲಂಬೋ,ಮೇ.23.ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆನಿಸಿಕೊಂಡ ನಮ್ಮ ದೇಶದ 543 ಕ್ಷೇತ್ರಗಳ ಮತ ಎಣಿಕೆ ಇಂದು ನಡೆಯುತ್ತಿದ್ದು, ಬಿಜೆಪಿ ಈಗಾಗಲೇ 288ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಟ್ಟಿದೆ.

2014ರ ಚುನಾವಣೆಯಲ್ಲಿ ಒಟ್ಟು 282 ಕ್ಷೇತ್ರಗಳನ್ನು ಗೆದ್ದಿತ್ತು.ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇನ್ನೂ ಮುಗಿದಿಲ್ಲ. ಆದರೂ ಎನ್​ಡಿಎ ಗೆಲುವು ಖಚಿತ ಎಂಬುದು ಅದು ಮುನ್ನಡೆ ಸಾಧಿಸಿದ ಕ್ಷೇತ್ರಗಳ ಸಂಖ್ಯೆಯೇ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರಧಾನಿ ರನಿಲ್​ ವಿಕ್ರಮಸಿಂಘೆ ಮೋದಿಯವರಿಗೆ ಅಭಿನಂದನೆ ಹೇಳಿದ್ದಾರೆ.ಟ್ವೀಟ್​ ಮಾಡಿರುವ ಅವರು, ನರೇಂದ್ರ ಮೋದಿಯವರಿಗೆ ದೊರೆತ ಅತಿದೊಡ್ಡದಾದ ಗೆಲುವು ಇದು. ನಮ್ಮ ದೇಶ ನಿಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿ, ಸಹಕಾರ ನೀಡುತ್ತ ಕೆಲಸ ಮಾಡಲು ಬಯಸುತ್ತದೆ ಎಂದು ಹೇಳಿದ್ದಾರೆ.

Also Read  12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ವಾಚ್!

 

error: Content is protected !!
Scroll to Top