ಪಶ್ಚಿಮ ಬಂಗಾಲದಲ್ಲಿ ಮ್ಯಾಜಿಕ್ ಮಾಡಿದ ಬಿಜೆಪಿ ➤ ‘ದೀದಿ’ ಸಿಎಂ ಮಮತಾ ಬ್ಯಾನರ್ಜಿಗೆ ಶಾಕ್‌

(ನ್ಯೂಸ್ ಕಡಬ) newskadaba.com ಕೋಲ್ಕತ , ಮೇ.23.ಇಂದು ಗುರುವಾರ ಲೋಕಸಭಾ ಚುನಾವಣೆ ಮತ ಎಣಿಕೆ ಬಿರುಸಿನಿಂದ ಸಾಗುತ್ತಿರುವಂತೆಯೇ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ 16 ಸೀಟುಗಳಲ್ಲಿ ಲೀಡ್‌ ಹೊಂದಿದ್ದು  ‘ದೀದಿ’ ಸಿಎಂ ಮಮತಾ ಬ್ಯಾನರ್ಜಿಗೆ ಶಾಕ್‌ ನೀಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಭಾರತೀಯ ಜನತಾ ಪಕ್ಷ ಈ ಬಾರಿಯ 2019ರ ಲೋಕಸಭಾ ಚುನವಾಣೆಯಲ್ಲಿ ರಾಮ ಮಂತ್ರ ಜಪಿಸುವ ಮೂಲಕ ಮ್ಯಾಜಿಕ್‌ ಮಾಡಿದೆ.

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ನಡೆಸಿರುವ ಹಲವು ರೋಡ್‌ ಶೋಗಳು, ರಾಲಿಗಳ ಪರಿಣಾಮವಾಗಿ ಇಲ್ಲಿನ ಮತದಾರರು ಬಿಜೆಪಿಯತ್ತ ವಾಲಿರುವುದು ಈಗ ನಿಚ್ಚಳವಾಗುತ್ತಿದೆ.ಪಶ್ಚಿಮ ಬಂಗಾಲದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳಿವೆ.ಈ ಪೈಕಿ ಬಿಜೆಪಿ ಪ್ರಕೃತ 16 ಸೀಟುಗಳಲ್ಲಿ ಮುಂದಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ 25 ಕ್ಷೇತ್ರಗಳಲ್ಲಿ ಮುಂದಿದೆ.ಪಶ್ಚಿಮ ಬಂಗಾಲದಲ್ಲಿ ಈ ಬಾರಿ ಕನಿಷ್ಠ 25 ಲೋಕಸಭಾ ಸೀಟುಗಳನ್ನು ಗೆಲ್ಲುವುದು ಬಿಜೆಪಿಯ ಗುರಿಯಾಗಿದೆ.

error: Content is protected !!

Join the Group

Join WhatsApp Group