ಮಾಜಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಳಗಾವಿ, ಮೇ.18. ಮಾಜಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಹಿಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಸಂಭಾಜಿ ಪಾಟೀಲ 1990 ರಲ್ಲಿ ಮಹಾಪೌರರಾಗಿದ್ದಾಗ ಹಿಡಕಲ್ ಜಲಾಶಯದಿಂದ ಬೆಳಗಾವಿ ಜಿಲ್ಲೆಗೆ ನೀರು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಗ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಕೇಸರಿಪೇಟಾ ತೊಡಿಸಿ ಬಹಿರಂಗವಾಗಿ ಸನ್ಮಾನ ಮಾಡಿದ ಮೊದಲ ಎಂಇಎಸ್ ಮಹಾಪೌರ ಕನ್ನಡ ಭಾಷಿಕ ಜನರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದರು‌. ಎಂಇಎಸ್ ನಾಯಕರಾಗಿದ್ದರೂ ಬೆಳಗಾವಿ ಮಹಾನಗರಪಾಲಿಕೆ ಮೊಟ್ಟಮೊದಲ ಕನ್ನಡ ಮೇಯರ್ ಅವರನ್ನು ಕಂಡಿತು. ಆಗ ಎಂಇಎಸ್ ನ ಸಂಭಾಜಿ ಸೇರಿದಂತೆ ಆರು ಜನ ಸದಸ್ಯರ ಬೆಂಬಲದಿಂದ ಸಿದ್ದನಗೌಡ ಪಾಟೀಲ ಮೊದಲ ಕನ್ನಡ ಮೇಯರ್ ಆದರು.

Also Read  ಆನ್ ಲೈನ್ ಕ್ಲಾಸ್ ➤ ಇಂಟರ್ನೆಟ್ ಗಾಗಿ ಮನೆಯ ಛಾವಣಿಯೇರಿದ ವಿದ್ಯಾರ್ಥಿನಿ

ಈ ಮೂಲಕ ಸಂಭಾಜಿ ಬೆಳಗಾವಿ ಯಲ್ಲಿ ಭಾಷಾ ರಾಜಕಾರಣದ ಧ್ರುವೀಕರಣ ಕ್ಕೆ ಕಾರಣರಾದರು. ಬೆಳಗಾವಿ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದ ಸಂಭಾಜಿ ಕನ್ನಡಿಗರ ಜೊತೆ ನಿಂತ ಪರಿಣಾಮ 1991 ರಲ್ಲಿ ಹಾಗೂ ನಾಯಕ ಎಂಬ ಕೀರ್ತಿ ಸಂಭಾಜಿ ಅವರದ್ದಾಯಿತು

error: Content is protected !!
Scroll to Top