ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಧಾನಿ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗೆ ಅರುಣ್ ಜೇತ್ಲಿ ಖಂಡನೆ

(ನ್ಯೂಸ್ ಕಡಬ) newskadaba.com, ನವದೆಹಲಿ ,ಮೇ.13.  ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿಯವರು ರಾಜಸ್ಥಾನದ ಅಳವಾರ್‌ ಕೇಸಿಗೆ ಸಂಬಂಧಿಸಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗಳನ್ನು ಖಂಡಿಸಿದ್ದಾರೆ.ಮಾಯಾವತಿ ಅವರ ವೈಯಕ್ತಿಕ ಟೀಕೆಗಳು ರಾಜಕೀಯ ಚರ್ಚೆಯನ್ನು ಹೊಸ ಕೆಳಮಟ್ಟಕ್ಕೆ ಒಯ್ದಿದೆ ಎಂದು ಅವರು ಹೇಳಿದ್ದಾರೆ.‘ಅಳವಾರ್‌ ರೇಪ ಕೇಸಿಗೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮಾಯಾವತಿ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಆಕೆಗೆ ನಿಜವಾಗಿಯೂ ಕಳಕಳಿ ಇದ್ದರೆ ರಾಜಸ್ಥಾನದಲ್ಲಿನ ಕಾಂಗ್ರೆಸ್‌ ಸರಕಾರಕ್ಕೆ ಆಕೆ ನೀಡಿರುವ ಬೆಂಬಲವನ್ನು ಹಿಂಪಡೆಯಬೇಕು’ ಎಂದು ಪ್ರಧಾನಿ ಮೋದಿ ಹೇಳಿದ್ದರು.ಇದಕ್ಕೆ ಉತ್ತರವಾಗಿ ಮಾಯಾವತಿ, “ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ದೇಶಾದ್ಯಂತ ದಲಿತರ ಮೇಲೆ ಅಸಂಖ್ಯಾತ ದೌರ್ಜನ್ಯ, ಅತ್ಯಾಚಾರ ನಡೆದಿವೆ. ಆದುದರಿಂದ ಅಳವಾರ್‌ ರೇಪ್‌ ಕೇಸಿನ ಬಗ್ಗೆ ಮಾತನಾಡಲು ಮೋದಿಗೆ ನೈತಿಕ ಹಕ್ಕು ಇಲ್ಲ’ ಎಂದು ಹೇಳಿದ್ದರು.

Also Read  ಅಮೆರಿಕದ ರಾಜಧಾನಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣ ➤ ಭಾರೀ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

 

error: Content is protected !!
Scroll to Top