ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಮುಖಂಡರ ಒಳಜಗಳದಿಂದ ಸರ್ಕಾರ ಪತನ: ಶೋಭಾ ಹೇಳಿಕೆ

(ನ್ಯೂಸ್ ಕಡಬ) newskadaba.com,ಕಲಬುರುಗಿ,ಮೇ.13. ಸೋಮವಾರ ಕಲಬುರಗಿಯಲ್ಲಿ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಜೆಡಿಎಸ್ ನವರು ಕೇವಲ 7 ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರಕ್ಕೆ ಸೀಮಿತವಾಗಿದ್ದಾರೆ. ರೆಸಾರ್ಟ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಸಿಎಂ ಮತ್ತೆ ಆ ಸ್ಥಾನದಲ್ಲಿ ಮುಂದುವರಿಯಬಾರದು ಎಂದರು.ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆ ಸಾಕ್ಷಿ. ಈ ಒಳಜಗಳ ಸರ್ಕಾರವನ್ನು ಬಲಿ ತೆಗೆದುಕೊಳ್ಳುತ್ತದೆ. ಮೈತ್ರಿ ಸರ್ಕಾರ ಗಾಢ ನಿದ್ದೆಗೆ ಜಾರಿದೆ. ಈ ಸರ್ಕಾರಕ್ಕೆ ಸ್ಪರ್ಶ ಜ್ಞಾನವೂ ಇಲ್ಲ, ಕಣ್ಣೂ ಕಾಣಿಸಲ್ಲ, ಕಿವಿನೂ ಕೇಳಿಸಲ್ಲ ಎಂದು ಬಿಜೆಪಿ ನಾಯಕಿ, ಮಾಜಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Also Read  ಅಮುಲ್‌ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಸ್ಪರ್ಧಿಸಲು ಅಲ್ಲ ‘ಸಹಬಾಳ್ವೆ’ ನಡೆಸಲು.!   ➤ ಅಮುಲ್‌ ಎಂಡಿ ಜಯನ್‌ ಮೆಹ್ತಾ ಹೇಳಿಕೆ!

 

error: Content is protected !!
Scroll to Top