ಮದ್ಯ ಸೇವಿಸಿ ಅಸ್ವಸ್ಥ; ನಾಲ್ವರ ಸ್ಥಿತಿ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.09 ಮಂಡ್ಯದ ಕೆ.ಆರ್‌.ಪೇಟೆಯ ಕೃಷ್ಣಾಪುರದಲ್ಲಿ ಮದ್ಯ ಸೇವಿಸಿದ ಬಳಿಕ ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ  ನಡೆದಿದೆ.ಮಂಗಳವಾರ ಸಂಜೆ ಮದ್ಯದ ಅಂಗಡಿಯೊಂದರಲ್ಲಿ ಮಹದೇವ,ಸುರೇಶ್‌, ತಮ್ಮಯ್ಯ ಮತ್ತು ಯೋಗೇಶ್‌ ಮದ್ಯ ಸೇವಿದ್ದಾರೆ. ಕೂಡಲೇ ನಾಲ್ವರು ವಾಂತಿ , ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ.

ನಾಲ್ವರನ್ನು ಮೊದಲು ಕೆ.ಆರ್‌.ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರಿದಿದೆ.ಅವಧಿ ಮೀರಿದ ಮದ್ಯ ಸೇವಿಸಿ ನಾಲ್ವರು ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Also Read  ಜ್ವರದಿಂದ ಬಳಲುತ್ತಿದ್ದ ಯುವಕ ಮೃತ್ಯು..!

error: Content is protected !!
Scroll to Top