ನರೇಂದ್ರಮೋದಿ,ಯೋಗಿಯನ್ನು ಅಧಿಕಾರದಿಂದ ಇಳಿಸುವ ವರೆಗೆ ಎಸ್ ಪಿ – ಬಿಎಸ್ ಪಿ ಮೈತ್ರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.09. ಅಝಂಗಡ , ಎಸ್‌ಪಿ ನಾಯಕ ಅಖಿಲೇಶ್ ಯಾದವ್‌ ಅವರು ಕಣಕ್ಕಿಳಿದಿರುವ ಅಝಂಗಡದಲ್ಲಿ ಚು ನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಯಾವತಿ, ನೀವು ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಮೈತ್ರಿಯನ್ನು ಮುರಿಯಲು ಸಾಧ್ಯವಿಲ್ಲ. ಸುಧೀರ್ಘ‌ ಹಾದಿಯಲ್ಲಿ ಮೈತ್ರಿ ಸಾಗಬೇಕಾಗಿದೆ.ನರೇಂದ್ರ ಮೋದಿ ಮತ್ತುಯೋಗಿ ಆದಿತ್ಯನಾಥ್‌ ಅವರನ್ನು ಅಧಿಕಾರದಿಂದ ಇಳಿಸುವವರೆಗೆ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಬುಧವಾರ ಹೇಳಿಕೆ ನೀಡಿದ್ದಾರೆ.

ನಾವು ಮೈತ್ರಿಯನ್ನು ಕೇವಲ ಮೋದಿ ವಿರುದ್ಧ ಮಾಡಿಲ್ಲ. ಮೋದಿ ಅನುಯಾಯಿ ಯೋಗಿ ಆದಿತ್ಯನಾಥ್‌ ಕುರ್ಚಿಯಿಂದ ಇಳಿಯುವವರೆಗೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.ಯೋಗಿ ಆದಿತ್ಯನಾಥ್‌ ಅವರನ್ನು ಮಠಕ್ಕೆ ವಾಪಾಸ್‌ ಕಳುಹಿಸುವವರೆಗೆ ನಮ್ಮ ಮೈತ್ರಿಗೆ ಏನೂ ಆಗುವುದಿಲ್ಲ ಎಂದರು.2014ರಲ್ಲಿ ಅಝಂಗಡದಲ್ಲಿ ಮುಲಾಯಂ ಸಿಂಗ್‌ ಯಾದವ್‌ ಗೆಲುವು ಸಾಧಿಸಿದ್ದರು. ಈ ಬಾರಿ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.

Also Read  ಕಡಬ ಸರಸ್ವತಿ ವಿದ್ಯಾಲಯದಲ್ಲಿ ಪರಿಕ್ಷಾಪೂರ್ವ ತರಬೇತಿ ಕಾರ್ಯಾಗಾರ

error: Content is protected !!
Scroll to Top