ಕೊಕ್ಕಡ: ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ ➤ ಆಲಂಕಾರು ನಿವಾಸಿಗಳು ಸೇರಿದಂತೆ ಐವರು ಗಂಭೀರ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.06. ಸ್ವಿಫ್ಟ್ ಡಿಸೈರ್ ಹಾಗೂ ಮಾರುತಿ ಸೆಲೆರಿಯೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಕೊಕ್ಕಡ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ.







ಅತೀ ವೇಗವಾಗಿ ಸಂಚರಿಸುತ್ತಿದ್ದ ಆಂಬ್ಯುಲೆನ್ಸ್ ವಾಹನಕ್ಕೆ ಸೈಡ್ ಕೊಡುತ್ತಿದ್ದ ವೇಳೆ ಬೆಂಗಳೂರು ಮೂಲದ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಕಡಬ ತಾಲೂಕಿನ ಆಲಂಕಾರು ಗ್ರಾಮದ ಪಜ್ಜಡ್ಕ ಸಮೀಪದ ಬುಡೇರಿಯಾ ನಿವಾಸಿಗಳಿದ್ದ ಮಾರುತಿ ಸೆಲೆರಿಯೋ ವಾಹನಗಳ ನಡುವೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಎರಡೂ ಕಾರುಗಳ ಮುಂಭಾಗ ಜಖಂಗೊಡಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.






error: Content is protected !!
Scroll to Top