ಕಡಬ: ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಎ.28. ಮನೆಯಿಂದ ತೆರಳಿದ ವ್ಯಕ್ತಿಯೋರ್ವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಅಡ್ಕಾಡಿ ನಿವಾಸಿ ಮಿರ್ಷಾದ್(38) ಎಪ್ರಿಲ್ 22 ರಂದು ಮನೆಯಿಂದ ಹೊರಹೋಗಿದ್ದು, ಈತನಕ ಮನೆಗೆ ಹಿಂದಿರುಗಿಲ್ಲ ಎನ್ನಲಾಗಿದೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಮಿರ್ಷಾದ್ ರವರ ಪತ್ನಿ ನೀಡಿದ ದೂರಿ‌‌ನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಪೂರ ಶರೀರ ಹಾಗೂ ಗೋಧಿ ಮೈಬಣ್ಣ ಹೊಂದಿರುವ ಮಿರ್ಷಾದ್ ಗಡ್ಡ ಬಿಟ್ಟಿದ್ದು, ಪತ್ತೆಯಾದಲ್ಲಿ ಕಡಬ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top