ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ರೈತರಿಂದ ಅರ್ಜಿ ಆಹ್ವಾನ

ಮಂಗಳೂರು ಏಪ್ರಿಲ್ 26(ನ್ಯೂಸ್ ಕಡಬ) newskadaba.com,) :- 2019-20ನೇ ಸಾಲಿಗೆ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ರೈತ ಫಲಾನುಭವಿಗಳಿಗೆ ಸಹಾಯಧನದ ಮೂಲಕ ಕಾರ್ಯಕ್ರಮ ಅನುಷ್ಟಾನಗೊಳಿಸುವುದಕ್ಕೆ ಸಂಬಂದಪಟ್ಟಂತೆ ಕ್ರಿಯಾಯೋಜನೆ ತಯಾರಿಸಿ ಅನುಷ್ಟಾನಕ್ಕೆ ಸಿದ್ದತೆ ಮಾಡಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಆಸಕ್ತ ರೈತರುಗಳು ಕಾಳುಮೆಣಸು, ಕೋಕೋ, ಬಾಳೆ, ಗೇರು ಹಾಗೂ ತೆಂಗು ಬೆಳೆಗಳಲ್ಲಿ ಹೊಸದಾಗಿ ತೋಟ ಮಾಡಲು, ತೆಂಗು, ಗೇರು ಹಾಗೂ ಕಾಳುಮೆಣಸು ಹಳೇ ತೋಟಗಳ ಪುನಶ್ಚೇತನ ಕಾರ್ಯಕ್ರಮ, ಜೇನು ಸಾಕಾಣಿಕೆಯಡಿ ಜೇನು ಪೆಟ್ಟಿಗೆ ಹಾಗೂ ಕಾಲನಿಗಳನ್ನು ಸ್ಥಾಪಿಸಲು ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ, ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ, ಸಂರಕ್ಷಿತ ಬೇಸಾಯದಡಿ(ಪಾಲಿಹೌಸ್ ಹಾಗೂ ನೆರಳು ಪರದೆ ಘಟಕ ನಿರ್ಮಾಣ), ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಯಡಿ(ಗೇರು, ಬಾಳೆ, ಕೋಕೋ, ಅಡಿಕೆ, ಕಾಳುಮೆಣಸು ಮುಂತಾದ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ), ಸಮಗ್ರ ಕೀಟ/ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ, ಶೀಥಲ ಗೃಹಗಳು, ಹಣ್ಣು ಮಾಗಿಸುವ ಘಟಕಗಳು ಹಾಗೂ ಪ್ಯಾಕ್‍ಹೌಸ್ ನಿರ್ಮಾಣ, ಸಣ್ಣ ಮಟ್ಟದ ಅಣಬೆ ಉತ್ಪಾದನಾ ಘಟಕ ನಿರ್ಮಾಣ ಯೋಜನೆಯಡಿಯಲ್ಲಿ ಭಾಗವಹಿಸಲು ಇಚ್ಛೆಪಟ್ಟಲ್ಲಿ ತಮ್ಮ ಜಮೀನಿನ ಪಹಣಿ ಪತ್ರ ಹಾಗೂ ಆಧಾರ ಕಾರ್ಡಿನ ಝೆರಾಕ್ಸ್ ಪ್ರತಿಯೊಂದಿಗೆ ಅರ್ಜಿಗಳನ್ನು ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬೇಕು.2019-20ನೇ ಸಾಲಿನಲ್ಲಿ ಸರ್ಕಾರವು ನೀಡುವ ಅನುದಾನದ ಲಭ್ಯತೆಯ ಮೇರೆಗೆ ತಾಲ್ಲೂಕಿನಲ್ಲಿ ಬಂದ ಅರ್ಜಿಗಳಲ್ಲಿ ಮೊದಲು ನೀಡಿದವರಿಗೆ ಮೊದಲ ಆದ್ಯತೆಯ ಮೇರೆಗೆ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂದಪಟ್ಟ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

 

error: Content is protected !!
Scroll to Top