ಕಡಬ: ಪರಿಸರದಾದ್ಯಂತ ಗುಡುಗು ಸಹಿತ ಭಾರೀ ಗಾಳಿ ಮಳೆ – ಮರ ಬಿದ್ದು ಕಾರು, ಆಟೋ ರಿಕ್ಷಾಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಕಡಬ ಪರಿಸರದಲ್ಲಿ ಭಾನುವಾರದಂದು ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಆಟೋ ರಿಕ್ಷಾ ಹಾಗೂ ಕಾರಿಗೆ ಹಾನಿಯಾಗಿದೆ.

ಕಡಬ, ಬಿಳಿನೆಲೆ, ಸುಬ್ರಹ್ಮಣ್ಯ, ಪಂಜ, ಕಾಣಿಯೂರು, ಆಲಂಕಾರು, ಆತೂರು, ಇಚಿಲಂಪಾಡಿ ಮೊದಲಾದೆಡೆ ಭಾರೀ ಗಾಳಿ ಮಳೆಯಾಗಿದ್ದು, ಮರ್ಧಾಳದಿಂದ ಕೊಣಾಜೆಗೆ ಸಂಪರ್ಕ ರಸ್ತೆಯ ಕೇನ್ಯ ಎಂಬಲ್ಲಿ ಬೃಹತ್ ಮರ ಬಿದ್ದ ಪರಿಣಾಮ ಆಟೋ ರಿಕ್ಷಾ ಹಾಗೂ ಕಾರಿಗೆ ಹಾನಿಯಾಗಿದೆ.

Scroll to Top